ಶತಕ ಗಳಿಸಿದ ವಿರಾಟ್ ಕೊಹ್ಲಿ ಶ್ರೇಯಾಂಕದಲ್ಲಿ ಭಾರೀ ಬಡ್ತಿ

ಬುಧವಾರ, 14 ಸೆಪ್ಟಂಬರ್ 2022 (16:08 IST)
ಮುಂಬೈ: ಏಷ್ಯಾ ಕಪ್ ನಲ್ಲಿ ಅಫ್ಘಾನಿಸ್ತಾನ  ವಿರುದ್ಧ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಐಸಿಸಿ ಶ್ರೇಯಾಂಕದಲ್ಲಿ ಭಾರೀ ಬಡ್ತಿ ಪಡೆದಿದ್ದಾರೆ.

ಒಟ್ಟು 14 ಸ್ಥಾನ ಮುನ್ನಡೆ ಪಡೆದಿರುವ ಕೊಹ್ಲಿ ಇದೀಗ ಶ್ರೇಯಾಂಕದಲ್ಲಿ ನಂ.15 ಕ್ಕೆ ಏರಿಕೆಯಾಗಿದ್ದಾರೆ. ಕಳಪೆ ಫಾರ್ಮ್ ನಲ್ಲಿದ್ದ ಕೊಹ್ಲಿ ಏಷ್ಯಾ ಕಪ್ ನಲ್ಲಿ ಒಂದು ಪಂದ್ಯದಲ್ಲಿ ಶೂನ್ಯ ಸಂಪಾದಿಸಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಶ್ರೇಯಾಂಕದಲ್ಲಿ ಭಾರೀ ಬಡ್ತಿ ಪಡೆದಿದ್ದಾರೆ.

ಮೊಹಮ್ಮದ್ ರಿಜ್ವಾನ್ ನಂ.1 ಸ್ಥಾನದಲ್ಲಿದ್ದರೆ ಆಡನ್ ಮಾರ್ಕರನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಭಾರತದ ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ