ರೋಡ್ ಸೇಫ್ಟೀ ಟೂರ್ನಮೆಂಟ್: ಮೊದಲ ಪಂದ್ಯದ ಟಿಕೆಟ್ ಸೋಲ್ಡ್ ಔಟ್

ಮಂಗಳವಾರ, 25 ಫೆಬ್ರವರಿ 2020 (09:25 IST)
ಮುಂಬೈ: ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ನ ಮೊದಲ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಮತ್ತು ಬ್ರಿಯಾನ್ ಲಾರಾ ನೇತೃತ್ವದ ವೆಸ್ಟ್ ಇಂಡೀಸ್ ಸೆಣಸಾಡಲಿದ್ದು, ಮೊದಲ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದೆ.


ಮಾರ್ಚ್ 7 ರಂದು ಮೊದಲ ಪಂದ್ಯ ವಾಂಖೆಡೆ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯದ ಟಿಕೆಟ್ ಗಳು ಬುಕ್ ಮೈ ಶೋನಲ್ಲಿ ಲಭ್ಯವಿದ್ದು, ಈಗಾಗಲೇ ಸೋಲ್ಡ್ ಔಟ್ ಆಗಿದೆ.

ಸಚಿನ್ ನೇತೃತ್ವದ ಭಾರತೀಯ ತಂಡದಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗರು ಆಡಲಿದ್ದಾರೆ. ಸಚಿನ್-ಸೆಹ್ವಾಗ್ ಜೋಡಿಯ ಆಟದ ಮೋಡಿ, ಜಹೀರ್ ಖಾನ್ ಬೌಲಿಂಗ್ ಮಿಂಚು ನೋಡಬಹುದಾಗಿದೆ. ವಿಂಡೀಸ್ ತಂಡವನ್ನು ಬ್ರಿಯಾನ್ ಲಾರಾ ಮುನ್ನಡೆಸಲಿದ್ದಾರೆ. ಹೀಗಾಗಿ ಈ ದಿಗ್ಗಜರ ಆಟವನ್ನು ಮತ್ತೆ ನೋಡುವ ಕ್ರೇಜ್ ನಲ್ಲಿ ಅಭಿಮಾನಿಗಳು ಮೈದಾನ ಭರ್ತಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ