ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟ ಶಿಖರ್ ಧವನ್ ಪುತ್ರ

ಸೋಮವಾರ, 24 ಫೆಬ್ರವರಿ 2020 (09:53 IST)
ನವದೆಹಲಿ: ಕ್ರಿಕೆಟಿಗರ ಮಕ್ಕಳೂ ಕ್ರಿಕೆಟಿಗರಾಗುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಉದಾಹರಣೆಗೆ ಸಚಿನ್ ಪುತ್ರ ಅರ್ಜುನ್, ದ್ರಾವಿಡ್ ಪುತ್ರ ಸಮಿತ್ ಈಗಾಗಲೇ ಕ್ರಿಕೆಟ್ ಲೋಕದಲ್ಲಿ ಸುದ್ದಿ ಮಾಡುತ್ತಿದ್ದಾರೆ.


ಇದೀಗ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಪುತ್ರ ಝೊರಾವರ್ ಸರದಿ. ‍‍ಝೊರಾವರ್ ಇನ್ನೂ ಆರು ವರ್ಷದ ಬಾಲಕ. ಆದರೆ ಆಗಲೇ ಕ್ರಿಕೆಟ್ ಮೇಲೆ ಅಪ್ಪನಂತೆ ಆಸಕ್ತಿ ಬೆಳೆಸಿಕೊಂಡಿದ್ದಾನೆ.

ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟಿರುವ ಝೊರಾವರ್ ಅಭ್ಯಾಸ ಶುರು ಮಾಡಿಕೊಂಡಿದ್ದಾನೆ. ಈತ ಇತರ ಮಕ್ಕಳೊಂದಿಗೆ ಮೈದಾನದಲ್ಲಿ ಫೀಲ್ಡಿಂಗ್ ಡ್ರಿಲ್ ಮಾಡುತ್ತಿರುವ ವಿಡಿಯೋವನ್ನು ಪ್ರಕಟಿಸಿರುವ ಶಿಖರ್ ಧವನ್ ಪತ್ನಿ ಆಯೆಷಾ ತಮ್ಮ ಮಗ ಕ್ರಿಕೆಟ್ ಅಭ್ಯಾಸ ಶುರು ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ