ನಾನು ಚೆನ್ನಾಗಿ ಬ್ಯಾಟಿಂಗ್ ಮಾಡ್ತಿದ್ದೇನೆ: ಕಳಪೆ ಫಾರ್ಮ್ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ

ಸೋಮವಾರ, 24 ಫೆಬ್ರವರಿ 2020 (09:35 IST)
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಗೆ ಬಂದಾಗಿನಿಂದ ನಾಯಕ ವಿರಾಟ್ ಕೊಹ್ಲಿಯಿಂದ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಬಂದಿಲ್ಲ. ಆದರೆ ತಾವು ರನ್ ಗಳಿಸಿಲ್ಲದೇ ಇರುವುದನ್ನು ಒಪ್ಪಿಕೊಳ್ಳಲು ಕೊಹ್ಲಿ ಮಾತ್ರ ಸಿದ್ಧರಿಲ್ಲ.


ಏಕದಿನ ಮತ್ತು ಟೆಸ್ಟ್ ಸೋಲಿಗೆ ಕೊಹ್ಲಿ ಕಳಪೆ ಫಾರ್ಮ್ ಕೂಡಾ ಮುಖ್ಯ ಕಾರಣವಾಗಿದೆ. ರೋಹಿತ್ ಶರ್ಮಾ, ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕೊಹ್ಲಿಯೇ ಭಾರತದ ಬ್ಯಾಟಿಂಗ್ ಗೆ ಅದರಲ್ಲೂ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಬೇಕಿತ್ತು. ಆದರೆ ಕೊಹ್ಲಿ ಬೇಗನೇ ಔಟಾಗುತ್ತಿರುವುದರಿಂದ ಯುವ ಆಟಗಾರರ ಮೇಲೆ ಹೆಚ್ಚಿನ ಹೊಣೆ ಬೀಳುತ್ತಿದೆ. ಇದರಿಂದಾಗಿ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದೆ.

ಆದರೆ ಇದನ್ನು ಒಪ್ಪಿಕೊಳ್ಳಲು ಕೊಹ್ಲಿ ಸಿದ್ಧರಿಲ್ಲ. ‘ನಾನು ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದೇನೆ. ರನ್ ಗಳಿಸುವುದೊಂದೇ ಬ್ಯಾಟಿಂಗ್ ನ ಫಾರ್ಮ್ ನಿರ್ಧರಿಸುವುದಿಲ್ಲ. ಸುದೀರ್ಘ ಸಮಯದಿಂದ ಆಡುತ್ತಿರುವಾಗ ಈ ರೀತಿ ಮೂರು-ನಾಲ್ಕು ಇನಿಂಗ್ಸ್ ನಲ್ಲಿ ರನ್ ಬಾರದೇ ಇದ್ದರೆ ಅದು ಚಿಂತೆಯ ವಿಷಯವಲ್ಲ. ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಹೊರಗಿನ ಜನ ಮಾಡುವ ಕಾಮೆಂಟ್ ಗಳು ನನಗೆ ಇಷ್ಟವಾಗಲ್ಲ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ