ನ್ಯೂಜಿಲೆಂಡ್ ಟಿ20 ಸರಣಿಗೂ ಕೊಹ್ಲಿ, ರೋಹಿತ್ ಇರಲ್ಲ?!

ಗುರುವಾರ, 12 ಜನವರಿ 2023 (08:50 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾದಲ್ಲಿ ಈಗ ಬದಲಾವಣೆಯ ಪರ್ವ ಜೋರಾಗಿ ನಡೆದಿದೆ. ಟಿ20 ಕ್ರಿಕೆಟ್ ನಲ್ಲಿ ಹಿರಿಯ ಆಟಗಾರರನ್ನು ಪಕ್ಕಕ್ಕಿಟ್ಟು ಕಿರಿಯರಿಗೆ ಮಣೆ ಹಾಕಲಾಗುತ್ತಿದೆ.

ಹಾರ್ದಿಕ್ ಪಾಂಡ್ಯರನ್ನು ಖಾಯಂ ನಾಯಕನಾಗಿಸಲು ಬಿಸಿಸಿಐ ತಯಾರಿ ನಡೆಸಿದೆ. ಇತ್ತೀಚೆಗೆ ನಡೆದ ಹೆಚ್ಚಿನ ಟಿ20 ಉಭಯ ದೇಶಗಳ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು.

ಇದೀಗ ಲಂಕಾ ವಿರುದ್ಧ ಏಕದಿನ ಸರಣಿ ಮುಕ್ತಾಯದ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಈ ಟಿ20 ಸರಣಿಯಲ್ಲೂ ರೋಹಿತ್, ಕೊಹ್ಲಿಗೆ ವಿಶ್ರಾಂತಿ ನೀಡಿ ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ಪಡೆಯನ್ನೇ ಆಯ್ಕೆ ಮಾಡಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ