ಕ್ಯಾಪ್ಟನ್ಸಿ ಹೋದ್ರೂ ನೋ ಟೆನ್ಷನ್: ಫ್ಯಾಮಿಲಿ ಜೊತೆ ಸಫಾರಿ ಹೊರಟ ರೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ರೋಹಿತ್ ರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯರನ್ನು ನಾಯಕರಾಗಿ ನೇಮಿಸಲಾಗಿತ್ತು. ಇದಕ್ಕೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ರೋಹಿತ್ ಆಪ್ತ ಕ್ರಿಕೆಟಿಗರೂ ಬೇಸರ ಹೊರಹಾಕಿದ್ದರು.
ಆದರೆ ಈ ಬಗ್ಗೆ ಬಹಿರಂಗವಾಗಿ ತುಟಿ ಬಿಚ್ಚ ರೋಹಿತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಲು ವಿಮಾನವೇರಿದ್ದರು. ಇದೀಗ ಟೆಸ್ಟ್ ಸರಣಿಗೆ ಮುನ್ನ ಸಿಕ್ಕ ಕಿರು ಬಿಡುವಿನ ಅವಧಿಯಲ್ಲಿ ಪತ್ನಿ ರಿತಿಕಾ, ಪುತ್ರಿ ಸಮೈರಾ ಜೊತೆ ಜಂಗಲ್ ಸಫಾರಿಗೆ ತೆರಳಿದ್ದಾರೆ.
ಕುಟುಂಬದ ಜೊತೆಗಿರುವ ತಮ್ಮ ಫೋಟೋವನ್ನು ರೋಹಿತ್ ಹಂಚಿಕೊಂಡಿದ್ದು, ಇದು ಸಫಾರಿ ಸಮಯ ಎಂದಿದ್ದಾರೆ. ಐಪಿಎಲ್ ನಾಯಕತ್ವ ಕಳೆದುಕೊಂಡರೂ ಹೆಚ್ಚು ತಲೆಕೆಡಿಸಿಕೊಳ್ಳದೇ ಫ್ಯಾಮಿಲಿ ಜೊತೆ ಹಿಟ್ ಮ್ಯಾನ್ ಸಮಯ ಕಳೆಯುತ್ತಿದ್ದಾರೆ.