ವಿಶ್ವಕಪ್ ಗೆದ್ದ ಬಳಿಕ ಪಟಾಕಿ ಸಿಡಿಸೋಣ: ವೈರಲ್ ಆಯ್ತು ರೋಹಿತ್ ಶರ್ಮಾ ಹೇಳಿಕೆ

ಸೋಮವಾರ, 18 ಸೆಪ್ಟಂಬರ್ 2023 (17:09 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ ಫೈನಲ್ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಧ‍್ಯಮಗೋಷ್ಠಿಯಲ್ಲಿ ನೀಡಿದ ಹೇಳಿಕೆ ಈಗ ವೈರಲ್ ಆಗಿದೆ.

ಏಷ್ಯಾ ಕಪ್ ಗೆದ್ದ ಬಳಿಕ ಕೊಲೊಂಬೊ ಮೈದಾನದಲ್ಲಿ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಲು ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮಾಧ‍್ಯಮಗೋಷ್ಠಿಯ ನಡುವೆಯೂ ಸುಡುಮದ್ದಿನ ಪ್ರದರ್ಶನ ಮುಂದುವರಿದಿತ್ತು. ಇದರಿಂದ ರೋಹಿತ್ ಶರ್ಮಾಗೆ ಮಾತನಾಡಲು ಕಷ್ಟವಾಗಿತ್ತು.

ಹೀಗಾಗಿ ತಮ್ಮ ಎಂದಿನ ಶೈಲಿಯಲ್ಲಿ ಕ್ಷಣ ಹೊತ್ತು ಮಾತು ನಿಲ್ಲಿಸಿದ ರೋಹಿತ್, ‘ಇರಿ.. ಈಗ ಪಟಾಕಿ ಸಿಡಿಸಿದ್ದು ಸಾಕು. ಮುಂದೆ ವಿಶ್ವಕಪ್ ಗೆಲ್ಲುತ್ತೇವಲ್ಲ, ಆಗ ಸಿಡಿಸಿ’ ಎಂದು ತಮಾಷೆ ಮಾಡಿದರು. ಅವರ ಈ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ