ಏಷ್ಯಾ ಕಪ್ ಕ್ರಿಕೆಟ್ ಫೈನಲ್: 50 ಕ್ಕೆ ಶ್ರೀಲಂಕಾ ಆಲೌಟ್

ಭಾನುವಾರ, 17 ಸೆಪ್ಟಂಬರ್ 2023 (17:13 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಕೂಟದ ಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರತೀಯ ಬೌಲರ್ ಗಳ ದಾಳಿಗೆ ಸಿಲುಕಿ ಜುಜುಬಿ 50 ರನ್ ಗೆ ಆಲೌಟ್ ಆಗಿದೆ.

ಇದು ಶ್ರೀಲಂಕಾ ಏಕದಿನ ಇತಿಹಾಸದಲ್ಲೇ ಕನಿಷ್ಠ ಮೊತ್ತವಾಗಿದೆ. ಮೊದಲಾರ್ಧದಲ್ಲಿ ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿದರೆ ದ್ವಿತೀಯಾರ್ಧದಲ್ಲಿ ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿ ಮಿಂಚಿದರು. ಇನ್ನೊಂದು ವಿಕೆಟ್ ಬುಮ್ರಾ ಪಾಲಾಯಿತು. ಲಂಕಾ ಪರ ಕುಸಲ ಮೆಂಡಿಸ್ 17 ರನ್ ಗಳಿಸಿದ್ದು ಗರಿಷ್ಠ ಸ್ಕೋರ್. ಉಳಿದಂತೆ ದುಶನ್ ಹೇಮಂತ ಅಜೇಯ 13 ರನ್ ಗಳಿಸಿದರು. ಉಳಿದೆಲ್ಲಾ ಬ್ಯಾಟಿಗರದ್ದು ಸಿಂಗಲ್ ಡಿಜಿಟ್ ಸ್ಕೋರ್.

ಅಂತಿಮವಾಗಿ ಶ್ರೀಲಂಕಾ ಕೇವಲ 15.2 ಓವರ್ ಗಳಲ್ಲಿ 50 ರನ್ ಗೆ ಆಲೌಟ್ ಆಯಿತು. ಈ ಮೂಲಕ ಏಕದಿನ ಮಾದರಿಯ ಪಂದ್ಯಕ್ಕೆ ಟಿ20 ಕಳೆ ಬಂತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ