ಏಷ್ಯಾ ಕಪ್ ಫೈನಲ್: ಐದು ಓವರ್ ನಲ್ಲಿಯೇ ದಾಖಲೆಯೋ ದಾಖಲೆ

ಭಾನುವಾರ, 17 ಸೆಪ್ಟಂಬರ್ 2023 (17:18 IST)
Photo Courtesy: Twitter
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬೆಂಕಿ ಎಸೆತಗಳಿಗೆ ಲಂಕಾ ಬ್ಯಾಟಿಗರು ಅಕ್ಷರಶಃ ಕಂಗಾಲಾಗಿದ್ದಾರೆ.

ಐದು ಓವರ್ ನಲ್ಲಿಯೇ ಲಂಕಾ 6 ಬ್ಯಾಟಿಗರು ಪೆವಿಲಿಯನ್ ಸೇರಿಕೊಂಡಿದ್ದು ವಿಪರ್ಯಾಸ. ಇದಕ್ಕೆ ಕಾರಣ ಮೊಹಮ್ಮದ್ ಸಿರಾಜ್ ದಾಖಲೆಯ ಬೌಲಿಂಗ್. ಸಿರಾಜ್ 4 ಓವರ್ ಗಳಲ್ಲಿಯೇ 5 ವಿಕೆಟ್ ಕಬಳಿಸಿದರು. ಬಳಿಕ ಮತ್ತೊಂದು 12 ನೇ ಓವರ್ ನಲ್ಲಿ ಇನ್ನೊಂದು ವಿಕೆಟ್ ಕಬಳಿಸುವ ಮೂಲಕ 6 ಓವರ್ ಗಳಲ್ಲಿಯೇ 6 ವಿಕೆಟ್ ಬುಟ್ಟಿಗೆ ಹಾಕಿಕೊಂಡರು.

ಇದರೊಂದಿಗೆ ಸಿರಾಜ್ ಆರಂಭಿಕ 10 ಓವರ್ ಗಳೊಳಗಾಗಿ ಗರಿಷ್ಠ ವಿಕೆಟ್ (5) ಕಬಳಿಸಿದ ದಾಖಲೆ ಮಾಡಿದರು. ಇದಕ್ಕೆ ಮೊದಲು ಶ್ರೀಲಂಕಾ ವಿರುದ್ಧ ಜಾವಗಲ್ ಶ್ರೀನಾಥ್ 4 ವಿಕೆಟ್ ಕಬಳಿಸಿದ್ದು ದಾಖಲೆಯಾಗಿತ್ತು. ಏಕದಿನ ಚರಿತ್ರೆಯಲ್ಲೇ ಇದು ಅತೀ ವೇಗದ 5 ವಿಕೆಟ್ ದಾಖಲೆಯಾಗಿದೆ. ಅಲ್ಲದೆ ಏಷ್ಯಾಕಪ್ ನಲ್ಲಿ ಗರಿಷ್ಠ 6 ವಿಕೆಟ್ ಕಬಳಿಸಿದ ಅಜಂತ ಮೆಂಡಿಸ್ ದಾಖಲೆಯನ್ನು ಸಿರಾಜ್ ಸರಿಗಟ್ಟಿದರು. ಇದು ಲಂಕಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ರನ್ ಎಂಬ ದಾಖಲೆಯಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ