ಸಿಕ್ಸರ್ ಏಟು ತಿಂದ ಬಾಲಕಿಗೆ ಬೊಂಬೆ ಕೊಟ್ಟು ಸಮಾಧಾನಿಸಿದ ರೋಹಿತ್ ಶರ್ಮಾ

ಗುರುವಾರ, 14 ಜುಲೈ 2022 (09:50 IST)
Photo Courtesy: Google
ಲಂಡನ್: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಏಟಿಗೆ ಗ್ಯಾಲರಿಯಲ್ಲಿ ಕೂತಿದ್ದ ಮಗುವಿಗೆ ಗಾಯವಾಗಿತ್ತು.

ಈ ಮಗುವಿಗೆ ತಕ್ಷಣವೇ ಇಂಗ್ಲೆಂಡ್ ತಂದ ಫಿಸಿಯೋ ಬಳಿ ತೆರಳಿ ಪ್ರಾಥಮಿಕ ಚಿಕಿತ್ಸೆ ಮಾಡಿದ್ದರು. ಆದರೆ ಬಾಲಕಿಗೆ ಇನ್ನೊಂದು ಅದೃಷ್ಟ ಕಾದಿತ್ತು.

ತಾನು ಹೊಡೆದ ಸಿಕ್ಸರ್ ನಿಂದ ಗಾಯಗೊಂಡ ಬಾಲಕಿಯನ್ನು ಭೇಟಿ ಮಾಡಿರುವ ರೋಹಿತ್ ಶರ್ಮಾಗೆ ಆಕೆಗೆ ಚಾಕ್ಲೇಟ್, ಟೆಡ್ಡಿಬೇರ್ ಕೊಟ್ಟು ಸಮಾಧಾನಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ