ಅಪ್ಪನ ಟೀಂ ಇಂಡಿಯಾ ಜರ್ಸಿ ತೊಟ್ಟ ರೋಹಿತ್ ಮಗಳು ಸಮೈರಾ

ಬುಧವಾರ, 1 ನವೆಂಬರ್ 2023 (17:52 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪುತ್ರಿ ಸಮೈರಾ ಅಪ್ಪನ ಟೀಂ ಇಂಡಿಯಾ ಜರ್ಸಿ ತೊಟ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ.

ಹಾಲೋವೀನ್ ಪಾರ್ಟಿಯಲ್ಲಿ ತಂದೆಯ ಪೋಷಾಕು ಧರಿಸಿ ಮಗಳು ಸಮೈರಾ ಮಿಂಚಿದ್ದಾಳೆ. ಈ ಕ್ಯೂಟ್ ಫೋಟೋಗಳನ್ನು ರೋಹಿತ್ ಪತ್ನಿ ರಿತಿಕಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ್ದಾರೆ.

ರೋಹಿತ್ ಹೆಸರು ಮತ್ತು ಅವರ ಜರ್ಸಿ ನಂಬರ್ ಇರುವ ಟೀಂ ಇಂಡಿಯಾ ಸಮವಸ್ತ್ರದಲ್ಲಿ ಸಮೈರಾ ಮಿಂಚಿದ್ದಾಳೆ. ನಾಳೆ ಭಾರತ ಮತ್ತು ಶ್ರೀಲಂಕಾ ನಡುವೆ ಮುಂಬೈನಲ್ಲಿ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ತಂದೆಗೆ ಚಿಯರ್ ಅಪ್ ಮಾಡಲು ಸಮೈರಾ ಮೈದಾನಕ್ಕೆ ಬರುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ