ರಣಜಿ ಟ್ರೋಫಿಯಲ್ಲೂ ರೋಹಿತ್ ಶರ್ಮಾ ಹುಳುಕು ಬಟಾಬಯಲು, ಚಾಂಪಿಯನ್ಸ್ ಟ್ರೋಫಿಯಲ್ಲಿ ಏನು ಕತೆಯೋ
ರಣಜಿ ಟ್ರೋಫಿಯಲ್ಲಿ ತವರು ಮುಂಬೈ ಪರ ಇಂದು ಜಮ್ಮುಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿದಿದ್ದಾರೆ. ಆದರೆ ರಣಜಿ ಪಂದ್ಯದಲ್ಲೂ ಅವರ ಕಳಪೆ ಫಾರ್ಮ್ ಮುಂದುವರಿದಿದ್ದು ಹೀಗಾದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಏನು ಕತೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
19 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಗಳಿಸಿದ್ದು ಕೇವಲ 3 ರನ್. ಬಳಿಕ ಪರಸ್ ಡೋಗ್ರಾ ಬೌಲಿಂಗ್ ನಲ್ಲಿ ಕ್ಯಾಚಿತ್ತು ನಿರ್ಗಮಿಸಿದ್ದಾರೆ. ಮುಂಬೈ ಆಗಲೇ ಆರಂಭಿಕ ವಿಕೆಟ್ ಕಳೆದುಕೊಂಡಿತ್ತು. ರೋಹಿತ್ ಕೂಡಾ ಔಟಾಗುವುದರೊಂದಿಗೆ ತಂಡ ಸಂಕಷ್ಟಕ್ಕೆ ಸಿಲುಕಿತು.
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಬಿಡಿ, ದೇಶೀಯ ಕ್ರಿಕೆಟ್ ನಲ್ಲಿಯೇ ಈ ಕತೆಯಾದರೆ ಮುಂದೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಬರಲಿದೆ. ಆಗಲೂ ಇದೇ ಫಾರ್ಮ್ ಮುಂದುವರಿಸಿದರೆ ಮತ್ತೆ ತಂಡ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಅದರಲ್ಲೂ ರೋಹಿತ್ ನಾಯಕ ಬೇರೆ. ಹೀಗೇ ಮುಂದುವರಿದಿರೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಯಾವುದೇ ಭರವಸೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.