ವೇಗಿ ಅರ್ಷದೀಪ್‌ ಸಿಂಗ್‌ ಮತ್ತೊಂದು ಮೈಲಿಗಲ್ಲು: ಯಜುವೇಂದ್ರ ಚಾಹಲ್‌ ದಾಖಲೆ ಧೂಳೀಪಟ

Sampriya

ಬುಧವಾರ, 22 ಜನವರಿ 2025 (20:10 IST)
Photo Courtesy X
ಕೋಲ್ಕತ್ತ: ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ದಾಖಲೆಗೆ ವೇಗಿ ಅರ್ಷದೀಪ್ ಸಿಂಗ್ ಪಾತ್ರವಾಗಿದ್ದಾರೆ.

ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಎಡಗೈ ವೇಗಿ ಅರ್ಷದೀಪ್ ಈ ದಾಖಲೆ ಬರೆದಿದ್ದಾರೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಭಾರತದ ಬೌಲರ್‌ಗಳ ಪಟ್ಟಿಯಲ್ಲಿ ಯಜುವೇಂದ್ರ ಚಾಹಲ್ (96 ವಿಕೆಟ್) ಅವರ ದಾಖಲೆಯನ್ನು ಅರ್ಷದೀಪ್ ಸಿಂಗ್ ಮುರಿದರು. 61ನೇ ಪಂದ್ಯ ಆಡುತ್ತಿರುವ ಅರ್ಷದೀಪ್ ಈಗಾಗಲೇ 97 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಮೊದಲ ಓವರ್‌ನಲ್ಲೇ ಫಿಲಿಪ್ ಸಾಲ್ಟ್ (0) ವಿಕೆಟ್ ಕಬಳಿಸಿದ ಅರ್ಷದೀಪ್, ಆಂಗ್ಲರ ಪಡೆಗೆ ಆಘಾತ ನೀಡಿದರು. ಇದಾದ ಬೆನ್ನಲ್ಲೇ ಬೆನ್ ಡಕೆಟ್ (4) ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು.

ಚಾಹಲ್‌ 80 ಪಂದ್ಯಗಳಲ್ಲಿ 96,  ಭುವನೇಶ್ವರ್ ಕುಮಾರ್ 87 ಪಂದಗಳಲ್ಲಿ 90,  ಜಸ್‌ಪ್ರೀತ್ ಬೂಮ್ರಾ 70 ಪಂದ್ಯಗಳಲ್ಲಿ 89, ಹಾರ್ದಿಕ್‌ ಪಾಂಡ್ಯ 110 ಪಂದ್ಯಗಳಲ್ಲಿ 89 ವಿಕೆಟ್‌ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ