ರೋಹಿತ್ ಶರ್ಮಾ ಕೈಗೆ ಪೆಟ್ಟು: ಆಫ್ರಿಕಾ ಟೆಸ್ಟ್ ನಿಂದ ಔಟ್
ನೆಟ್ ಪ್ರಾಕ್ಟೀಸ್ ವೇಳೆ ಥ್ರೋ ಡೌನ್ ಸ್ಪೆಷಲಿಸ್ಟ್ ಎಸೆದ ಚೆಂಡು ರೋಹಿತ್ ಮೊಣಕೈಗೆ ತಗುಲಿದ್ದು, ನೋವಿನಿಂದಾಗಿ ಅವರು ಅಭ್ಯಾಸದಿಂದ ಹೊರನಡೆಯಬೇಕಾಯಿತು.
ಇದರಿಂದಾಗಿ ಅವರು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯಿಂದ ವಿಶ್ರಾಂತಿ ಪಡೆಯಲಿರುವ ರೋಹಿತ್ ಏಕದಿನ ಸರಣಿ ವೇಳೆ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ.