ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿದ ಋತುರಾಜ್ ಗಾಯಕ್ ವಾಡ್
ಈ ನಡುವೆ ಯುವ ಬ್ಯಾಟ್ಸ್ ಮನ್ ಋತುರಾಜ್ ಗಾಯಕ್ ವಾಡ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಬೆನ್ನು ಬೆನ್ನಿಗೆ ಶತಕ ಸಿಡಿಸಿ ಎಲ್ಲರ ಗಮನ ಸೆಳಯುತ್ತಿದ್ದಾರೆ.
ಅವರ ಈಗಿನ ಫಾರ್ಮ್ ಗಮನಿಸಿದರೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಅತ್ತ ಶಿಖರ್ ಧವನ್ ಉತ್ತಮ ನಿರ್ವಹಣೆ ತೋರುವಲ್ಲಿ ವಿಫಲರಾಗಿರುವುದರಿಂದ ಆರಂಭಿಕ ಸ್ಥಾನಕ್ಕೆ ಋತುರಾಜ್ ಆಯ್ಕೆಯಾಗುವ ಎಲ್ಲಾ ಸಾಧ‍್ಯತೆಗಳಿವೆ.