ವಿರಾಟ್ ಕೊಹ್ಲಿ ನಮಗೆ ಆಯ್ಕೆಯಷ್ಟೇ: ರೋಹಿತ್ ಶರ್ಮಾ

ಭಾನುವಾರ, 18 ಸೆಪ್ಟಂಬರ್ 2022 (18:00 IST)
ಮೊಹಾಲಿ: ಟಿ20 ವಿಶ್ವಕಪ್ ಗೆ ಪೂರ್ವಭಾವಿಯಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡಲಿದ್ದು, ಇದಕ್ಕೆ ಮೊದಲು ನಾಯಕ ರೋಹಿತ್ ಶರ್ಮಾ ಟೀಂ ಕಾಂಬಿನೇಷನ್ ಬಗ್ಗೆ ಮಾತನಾಡಿದ್ದಾರೆ.

ಏಷ್ಯಾ ಕಪ್ ನಲ್ಲಿ ಇತ್ತೀಚೆಗೆ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದು ಶತಕ ಸಿಡಿಸಿದ್ದರು. ಹೀಗಾಗಿ ಟಿ20 ವಿಶ್ವಕಪ್ ನಲ್ಲಿ ಅವರನ್ನೇ ಆರಂಭಿಕರಾಗಿ ಕಣಕ್ಕಿಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

‘ವಿರಾಟ್ ಕೊಹ್ಲಿ ಆರಂಭಿಕರಾಗಿ ನಮಗೆ ಒಂದು ಆಯ್ಕೆಯಷ್ಟೇ. ನಮ್ಮ ಆಟಗಾರರ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ನಾವು ಅದನ್ನು ಒಂದು ಆಯ್ಕೆಯಾಗಿ ಪರಿಗಣಿಸುತ್ತೇವೆ. ನಮ್ಮಲ್ಲಿ ಮೂರನೇ ಆರಂಭಿಕರಿಲ್ಲದ ಕಾರಣ, ಕೊಹ್ಲಿ ತಮ್ಮ ಫ್ರಾಂಚೈಸಿ ಪರ ಆರಂಭಿಕರಾಗಿ ಉತ್ತಮ ದಾಖಲೆ ಹೊಂದಿರುವುದರಿಂದ ನಾವು ಅವರನ್ನು ಆರಂಭಿಕ ಸ್ಥಾನಕ್ಕೆ ಒಂದು ಪ್ರಬಲ ಆಯ್ಕೆಯಾಗಿ ಪರಿಗಣಿಸುತ್ತೇವೆ’ ಎಂದು ರೋಹಿತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ