ಧರ್ಮಶಾಲಾದಲ್ಲಿ ಪಂದ್ಯದ ನಡುವೆ ನಾವು ಫ್ಯಾಶನ್ ಶೋ ಮಾಡಿದ್ದೆವು: ರೋಹಿತ್ ಶರ್ಮಾ

ಮಂಗಳವಾರ, 14 ನವೆಂಬರ್ 2023 (17:59 IST)
Photo Courtesy: Twitter
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತದ ಅಭೂತಪೂರ್ವ ಯಶಸ್ಸಿನ ಬಗ್ಗೆ ಮಾತನಾಡುವಾಗ ನಾಯಕ ರೋಹಿತ್ ಶರ್ಮಾ ವಿಶೇಷ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.

ಸತತ ಗೆಲುವುಗಳ ನಂತರ ತಂಡದ ಡ್ರೆಸ್ಸಿಂಗ್ ರೂಂ ವಾತಾವರಣ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸುವಾಗ ರೋಹಿತ್ ಸ್ವಾರಸ್ಯಕರ ವಿಚಾರವೊಂದನ್ನು ಹೇಳಿದ್ದಾರೆ.

‘ಧರ್ಮಶಾಲಾದಲ್ಲಿ ಪಂದ್ಯದ ನಡುವೆ ಬ್ರೇಕ್ ಸಮಯದಲ್ಲಿ ನಾವು ಫ್ಯಾಶನ್ ಶೋ ಕೂಡಾ ಮಾಡಿದ್ದೆವು.  ಆದರೆ ಯಾರು ಗೆದ್ದರು ಎಂಬುದನ್ನು ನಾನು ಇಲ್ಲಿ ಹೇಳುವುದಿಲ್ಲ. ಸದ್ಯಕ್ಕೆ ತಂಡದೊಳಗೆ ವಾತಾವರಣ ಅತ್ಯುತ್ತಮವಾಗಿದೆ, ರಿಲ್ಯಾಕ್ಸ್ ಆಗಿದ್ದೇವೆ’ ಎಂದು ರೋಹಿತ್ ನಗುತ್ತಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ