ನ್ಯೂಜಿಲೆಂಡ್ ನಲ್ಲಿ ಟೀಂ ಇಂಡಿಯಾಗೆ ಭಾರೀ ಆಘಾತ

ಮಂಗಳವಾರ, 4 ಫೆಬ್ರವರಿ 2020 (09:18 IST)
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ರೂಪದಲ್ಲಿ ಬಹುದೊಡ್ಡ ಆಘಾತ ಸಿಕ್ಕಿದೆ. ಗಾಯಗೊಂಡ ರೋಹಿತ್ ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.


ಅಂತಿಮ ಟಿ20 ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೊಳಗಾಗಿದ್ದ ರೋಹಿತ್ ಅರ್ಧದಿಂದಲೇ ಪೆವಿಲಿಯನ್ ಗೆ ಮರಳಿದ್ದರು. ಇದೀಗ ಅವರ ಗಾಯದ ತೀವ್ರತೆ ಆಧರಿಸಿ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಕೆಎಲ್ ರಾಹುಲ್ ಜತೆಗೆ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿಯಬಹುದು. ಏಕದಿನ ಸರಣಿಗೂ ರೋಹಿತ್ ಜಾಗಕ್ಕೆ ಮಯಾಂಕ್ ಗೆ ಅವಕಾಶ ನೀಡಲಾಗಿದೆ. ಶಿಖರ್ ಧವನ್ ಕೂಡಾ ತಂಡದಲ್ಲಿಲ್ಲದೇ ಇರುವುದರಿಂದ ಏಕದಿನ ಪಂದ್ಯದಲ್ಲೂ ಮಯಾಂಕ್ ಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ