ಮತ್ತೆ ಮುಗ್ಗರಿಸಿದ ನ್ಯೂಜಿಲೆಂಡ್: ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ಟೀಂ ಇಂಡಿಯಾ

ಭಾನುವಾರ, 2 ಫೆಬ್ರವರಿ 2020 (16:10 IST)
ಬೇ ಓವಲ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ರನ್ ಗಳಿಂದ ಗೆದ್ದುಕೊಂಡು ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 163 ರನ್ ಗಳ ಗುರಿ ನೀಡಿತು. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ದುರದೃಷ್ಟವಶಾತ್ ಗಾಯಗೊಂಡು ಬ್ಯಾಟಿಂಗ್ ನಿಂದ ವಿರಮಿಸಬೇಕಾಯಿತು. ಆಗ ರೋಹಿತ್ 60 ರನ್ ಗಳಿಸಿದ್ದರು. ಕೆಎಲ್ ರಾಹುಲ್ 45 ಮತ್ತು ಶ್ರೇಯಸ್ ಐಯರ್ 33 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಆರಂಭದಲ್ಲಿಯೇ ಮಾರ್ಟಿನ್ ಗುಪ್ಟಿಲ್ ವಿಕೆಟ್ ಕಳೆದು ಸಂಕಷ್ಟಕ್ಕೀಡಾಯಿತು. ಮೂರನೇ ಕ್ರಮಾಂಕದಲ್ಲಿ ಟಿಮ್ ಸೀಫರ್ಟ್ 50 ರನ್ ಗಳಿಸಿದರೆ ರಾಸ್ ಟೇಲರ್ 53 ರನ್ ಗಳಿಸಿ ಕೊನೆಯ ಕ್ಷಣದಲ್ಲಿ ಔಟಾದರು. ಉಳಿದವರು ಎರಡಂಕಿಯ ಮೊತ್ತವನ್ನೂ ದಾಟಲಿಲ್ಲ. ಕೊನೆಯ ಓವರ್ ನಲ್ಲಿ ಟಿಮ್ ಸೌಥಿ ಎರಡು ಸಿಕ್ಸರ್ ಹೊಡೆದರೂ ಕೊನೆಯ ಎರಡು ಎಸೆತದಲ್ಲಿ 9 ರನ್ ಗಳಿಸಲಾಗದೇ ಮುಗ್ಗರಿಸಿದ ನ್ಯೂಜಿಲೆಂಡ್ ವೈಟ್ ವಾಶ್ ಮುಖಭಂಗಕ್ಕೀಡಾಯಿತು. ಅಂತಿಮವಾಗಿ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ