ಒಂದೇ ಪಂದ್ಯಕ್ಕೆ ನಾನು ಕೆಟ್ಟ ನಾಯಕನಾಗುತ್ತೇನೆ: ರೋಹಿತ್ ಆಕ್ಷೇಪ
ಮಾಧ‍್ಯಮಗೋಷ್ಠಿಯಲ್ಲಿ ಮಾತನಾಡಿರುವ ರೋಹಿತ್ ಹಲವು ವಿಚಾರಗಳನ್ನು ಹೊರಹಾಕಿದ್ದಾರೆ. ಈ ಪಂದ್ಯಕ್ಕೆ ಕೆಲವು ಬದಲಾವಣೆಯಾಗುವ ಸಾಧ‍್ಯತೆಯಿದೆ ಎಂದು ಸುಳಿವು ನೀಡಿದ್ದಾರೆ. ಮೂವರು ಸ್ಪಿನ್ನರ್ ಗಳನ್ನು ಆಡಿಸಲು ಸಿದ್ಧವಿರುವುದಾಗಿ ಹೇಳಿರುವ ರೋಹಿತ್ ಇಂದು ಅಶ್ವಿನ್ ರನ್ನು ಕಣಕ್ಕಿಳಿಸುವ ಸೂಚನೆ ನೀಡಿದ್ದಾರೆ.
ಇನ್ನು, ಮಾಧ‍್ಯಮಗೋಷ್ಠಿಯಲ್ಲಿ ಅವರ ನಾಯಕತ್ವದ ಬಗ್ಗೆ ಹೊಗಳಿಕೆ ಕೇಳಿಬಂದಾಗ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ರೋಹಿತ್ ಸಂದರ್ಭಕ್ಕೆ ತಕ್ಕಂತೆ ನಾವು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾವು ಯಾವತ್ತೂ ಕೆಟ್ಟ ಪರಿಸ್ಥಿತಿಗೆ ರೆಡಿಯಾಗಿರುತ್ತೇವೆ. ಒಂದು ವೇಳೆ ಒಂದು ಪಂದ್ಯ ಸೋತರೂ ನಾನು ಕೆಟ್ಟ ನಾಯಕನೆನಿಸಿಕೊಳ್ಳುತ್ತೇನೆ ಎಂದಿದ್ದಾರೆ.