ದ.ಆಫ್ರಿಕಾ ಏಕದಿನ ಸರಣಿಗೆ ಕೆಎಲ್ ರಾಹುಲ್ ಕ್ಯಾಪ್ಟನ್: ನೆಟ್ಟಿಗರ ಅಸಮಾಧಾನ
ಆದರೆ ಬಿಸಿಸಿಐ ನಿರ್ಧಾರ ನೆಟ್ಟಿಗರು ಹುಬ್ಬೇರುವಂತೆ ಮಾಡಿದೆ. ಮೊದಲು ರೋಹಿತ್ ರನ್ನು ಸೀಮಿತ ಓವರ್ ಗಳಿಗೆ ನಾಯಕನಾಗಿ ಮಾಡಲಾಯ್ತು. ಈ ವೇಳೆ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿಯಾಗಿತ್ತು. ಅದಾದ ಬಳಿಕ ರೋಹಿತ್ ಗಾಯಗೊಂಡರು. ಇದರ ಬೆನ್ನಲ್ಲೇ ಕೊಹ್ಲಿ ಏಕದಿನ ಸರಣಿಯಲ್ಲೂ ಆಡುವುದಾಗಿ ಹೇಳಿದ್ದರು.
ಇದೀಗ ರೋಹಿತ್ ರನ್ನು ಗಾಯದ ನೆಪ ಹೂಡಿ ಸರಣಿಯಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಕೆಎಲ್ ರಾಹುಲ್ ಗೆ ನಾಯಕತ್ವ ನೀಡಲಾಗಿದೆ. ಇದರ ಹಿಂದೆ ಬೇರೆ ಏನೋ ಕಾರಣವಿರಬಹುದು ಎಂದು ನೆಟ್ಟಿಗರು ಅನುಮಾನಿಸಿದ್ದಾರೆ. ಇನ್ನು ಕೆಲವರು ರೋಹಿತ್ ರನ್ನು ದೈಹಿಕವಾಗಿ ಫಿಟ್ ಇಲ್ಲದ ನಾಯಕ. ಇಂತಹ ಆಟಗಾರನನ್ನು ಯಾವ ಧೈರ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ನೇಮಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.