ದ.ಆಫ್ರಿಕಾಗೆ ತೆರಳಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

ಶನಿವಾರ, 16 ಡಿಸೆಂಬರ್ 2023 (09:30 IST)
ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದ.ಆಫ್ರಿಕಾದತ್ತ ಪ್ರಯಾಣ ಬೆಳೆಸಿದ್ದಾರೆ.

ದ.ಆಫ್ರಿಕಾ ವಿರುದ್ಧ ಡಿಸೆಂಬರ್ 26 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಪಾಲ್ಗೊಳ್ಳಲು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ತಂಡದ ಸದಸ್ಯರು ಪ್ರಯಾಣ ಬೆಳೆಸಿದ್ದಾರೆ.

ದುಬೈ ಮಾರ್ಗವಾಗಿ ಆಟಗಾರರು ಆಫ್ರಿಕಾ ನಾಡಿಗೆ ಪ್ರಯಾಣ ಬೆಳೆಸಿದ್ದಾರೆ. ರೋಹಿತ್ ಮತ್ತು ಹಿರಿಯ ಆಟಗಾರರಿಗೆ ಏಕದಿನ ಮತ್ತು ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಟೆಸ್ಟ್ ಸರಣಿಗೆ ರೋಹಿತ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ರೋಹಿತ್, ವಿರಾಟ್ ಸೇರಿದಂತೆ ಹಿರಿಯ ಆಟಗಾರರಿಗೆ ಇದು ಮೊದಲ ಸರಣಿಯಾಗಿದೆ. ಕೆಲವು ದಿನಗಳ ಬ್ರೇಕ್ ನ ನಂತರ ಸ್ಟಾರ್ ಆಟಗಾರರು ಕಣಕ್ಕೆ ವಾಪಸ್ ಆಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ