ಮದುವೆ ಆನಿವರ್ಸರಿ ಸಂಭ್ರಮದಲ್ಲಿ ರೋಹಿತ್ ಶರ್ಮಾ: ಹಿಟ್ ಮ್ಯಾನ್-ರಿತಿಕಾ ಮೊದಲ ಭೇಟಿ ಎಲ್ಲಿ?
ರೋಹಿತ್ ಮತ್ತು ರಿತಿಕಾ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದೂ ಪ್ರೇಮ ವಿವಾಹವಾಗಿತ್ತು. ತಮ್ಮ ಮ್ಯಾನೇಜರ್ ಆಗಿದ್ದ ರಿತಿಕಾರನ್ನೇ ರೋಹಿತ್ ಪ್ರೀತಿಸಿ ಮದುವೆಯಾಗಿದ್ದರು.
ಇವರಿಬ್ಬರ ಮೊದಲ ಭೇಟಿ ಜಾಹೀರಾತು ಶೂಟಿಂಗ್ ಒಂದರಲ್ಲಿ. ಆ ಶೂಟಿಂಗ್ ಈವೆಂಟ್ ಮ್ಯಾನೇಜರ್ ರಿತಿಕಾ ಆಗಿದ್ದರು. ಆಗಲೇ ರಿತಿಕಾಗೆ ಕ್ರಿಕೆಟಿಗ ಯುವರಾಜ್ ಸಿಂಗ್ ಸಹೋದರ ಸಮಾನರಾಗಿದ್ದರು. ಹೀಗಾಗಿ ರೋಹಿತ್ ಗೆ ಮೊದಲೇ ರಿತಿಕಾ ಮೇಲೆ ಕಣ್ಣು ಹಾಕಬೇಡ ಎಂದು ಎಚ್ಚರಿಕೆ ಕೊಟ್ಟಿದ್ದರಂತೆ.
ಆದರೆ ವಿಧಿಯಾಟ ಹೇಗಿರುತ್ತದೆ ನೋಡಿ. ರೋಹಿತ್ ರ ಕ್ರಿಕೆಟ್, ಜಾಹೀರಾತು ಒಪ್ಪಂದಗಳ ಮ್ಯಾನೇಜರ್ ಆಗಿ ರಿತಿಕಾ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿತು. ಆರು ವರ್ಷಗಳ ಒಡನಾಟದ ಬಳಿಕ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ಜೋಡಿಗೆ ಮುದ್ದಾದ ಹೆಣ್ಣು ಮಗುವೂ ಇದೆ.