ಶ್ರೀಲಂಕಾ ಅಭಿಮಾನಿಯ ಮನೆಗೆ ಭೇಟಿ ನೀಡಿದ ರೋಹಿತ್ ಶರ್ಮಾ
ಶ್ರೀಲಂಕಾದ ಅಧಿಕೃತ ಅಭಿಮಾನಿ ಅಂಕಲ್ ಪರ್ಸಿ ರೋಹಿತ್ ಶರ್ಮಾ ಅಭಿಮಾನಿಯೂ ಹೌದು. ಈ ಹಿಂದೆಯೂ ರೋಹಿತ್ ಅವರನ್ನು ಭೇಟಿಯಾಗಿದ್ದು ಇದೆ. ಆದರೆ ಈಗ ಅನಾರೋಗ್ಯ ಕಾರಣದಿಂದ ಅಂಕಲ್ ಪರ್ಸಿಗೆ ಮೈದಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಸ್ವತಃ ರೋಹಿತ್ ಶರ್ಮಾ ಅವರೇ ಅಂಕಲ್ ಪರ್ಸಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ರೋಹಿತ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.