ಗೆದ್ದು ಬೀಗುತ್ತಿದ್ದ ದ.ಆಫ್ರಿಕಾಗೆ ಮ್ಯಾಚ್ ರೆಫರಿ ಕೊಟ್ಟ ಶಾಕ್!

ಸೋಮವಾರ, 12 ಫೆಬ್ರವರಿ 2018 (08:25 IST)
ಜೊಹಾನ್ಸ್ ಬರ್ಗ್: ಭಾರತದ ವಿರುದ್ಧ ನಾಲ್ಕನೇ ಏಕದಿನ ಗೆದ್ದು, ಸರಣಿ ಕೈ ತಪ್ಪುವ ಭೀತಿ ತಪ್ಪಿಸಿಕೊಂಡ ದ.ಆಫ್ರಿಕಾ ಆಟಗಾರರಿಗೆ ಮ್ಯಾಚ್ ರೆಫರಿ ದಂಡದ ಬರೆ ಎಳೆದಿದ್ದಾರೆ.
 

ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಆಫ್ರಿಕಾ ಈ ಪಂದ್ಯವನ್ನು 5 ವಿಕೆಟ್ ಗಳಿಂದ ಗೆದ್ದಿತ್ತು. ಆದರೆ ನಿಧಾನಗತಿಯ ಓವರ್ ಪೂರೈಸಿದ್ದಕ್ಕಾಗಿ ಆಫ್ರಿಕಾ ಕ್ರಿಕೆಟಿಗರಿಗೆ ಶೇ. 10 ರಷ್ಟು ದಂಡ ವಿಧಿಸಲಾಗಿದೆ.

ನಾಯಕ ಮಾರ್ಕರಮ್ ಶೇ. 20 ರಷ್ಟು ಪಂದ್ಯದ ಸಂಭಾವನೆಯನ್ನು ದಂಡದ ರೂಪದಲ್ಲಿ ತೆರಬೇಕಾಗಿದೆ. ಮುಂದಿನ 12 ತಿಂಗಳೊಳಗೆ ಆಫ್ರಿಕಾ ಇದೇ ತಪ್ಪು ಮಾಡಿದರೆ ನಾಯಕನಿಗೆ ಅಮಾನತಿನ ಶಿಕ್ಷೆ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ