99 ಕ್ಕೆ ದ.ಆಫ್ರಿಕಾ ಆಲೌಟ್: ಟೀಂ ಇಂಡಿಯಾ ಗೆಲುವಿಗೆ 100 ರ ಗುರಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಹೆನ್ರಿಚ್ ಕ್ಲಾಸನ್ 34 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟಿಗರೂ ನಿಂತು ಆಡುವ ಧೈರ್ಯ ತೋರಲಿಲ್ಲ. ಜಾನೇಮನ್ ಮಲನ್ 15, ಮ್ಯಾಕ್ರೋ ಜಾನ್ಸನ್ 14 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟಿಗರದ್ದು ಒಂದಂಕಿಯ ಸಾಧನೆ. ಭಾರತದ ಪರ ಕುಲದೀಪ್ ಯಾದವ್ 4, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮ್ಮದ್ ತಲಾ 2 ವಿಕೆಟ್ ಕಬಳಿಸಿದರು.
ಇದರೊಂದಿಗೆ ಆಫ್ರಿಕಾ 27.1 ಓವರ್ ಗಳಲ್ಲಿ 99 ರನ್ ಗೆ ಆಲೌಟ್ ಆಯಿತು. ಈ ಮೂಲಕ ಭಾರತದ ವಿರುದ್ಧ ಏಕದಿನ ಪಂದ್ಯದಲ್ಲಿ ಅತ್ಯಂತ ಕನಿಷ್ಠ ಮೊತ್ತ ಗಳಿಸಿದ ಕುಖ್ಯಾತಿಗೊಳಗಾಯಿತು.