ವಿರಾಟ್ ಕೊಹ್ಲಿ ಟ್ರೈನಿಂಗ್ ಗಾಗಿ ಸ್ವತಃ ಫೀಲ್ಡಿಗಿಳಿದ ರಾಹುಲ್ ದ್ರಾವಿಡ್!
 
ಕೊಹ್ಲಿ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಸುಮ್ಮನೇ ಕೂರದೇ ಕಠಿಣ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.
									
				ಈ ವೇಳೆ ಕೊಹ್ಲಿಗೆ ಸಹಾಯ ಮಾಡಲು ಸ್ವತಃ ಕೋಚ್ ರಾಹುಲ್ ದ್ರಾವಿಡ್ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸಿದರು.  ಈ ವೇಳೆ ದ್ರಾವಿಡ್ ಕೊಹ್ಲಿಗೆ ಪದೇ ಪದೇ ಕೆಲವು ಸಲಹೆಗಳನ್ನೂ ನೀಡುತ್ತಿದ್ದರು. ಅಭ್ಯಾಸ ಪಂದ್ಯದ ಬಳಿಕ ಕೆಎಲ್ ರಾಹುಲ್ ಕೂಡಾ ಕೊಹ್ಲಿಗೆ ಜೊತೆಯಾದರು.