ಚಿಪಾಕ್ ನಲ್ಲಿ ಸಚಿನ್.. ಸಚಿನ್ ಕೂಗು: ನಿವೃತ್ತಿಯಾದರೂ ಮುಗಿಯದ ಕ್ರೇಜ್

ಗುರುವಾರ, 25 ಮೇ 2023 (09:30 IST)
Photo Courtesy: Twitter
ಚೆನ್ನೈ: ನಿವೃತ್ತಿಯಾಗಿ 10 ವರ್ಷಗಳೇ ಕಳೆದರೂ ಸಚಿನ್ ತೆಂಡುಲ್ಕರ್ ಮೇಲಿರುವ ಅಭಿಮಾನಿಗಳ ಕ್ರೇಜ್ ಈಗಲೂ ಕೊಂಚವೂ ಕಡಿಮೆಯಾಗಿಲ್ಲ.

 ಐಪಿಎಲ್ 2023 ರಲ್ಲಿ ಎಲಿಮಿನೇಟರ್ ಪಂದ್ಯ ಮುಂಬೈ ಇಂಡಿಯನ್ಸ್-ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪಂದ್ಯ ಚಿಪಾಕ್ ಮೈದಾನದಲ್ಲಿ ನಡೆದಿತ್ತು. ಈ ಪಂದ್ಯಕ್ಕೆ ಮುಂಬೈ ಮೆಂಟರ್ ಸಚಿನ್ ತೆಂಡುಲ್ಕರ್ ಕೂಡಾ ಉಪಸ್ಥಿತರಿದ್ದರು.

ಸಚಿನ್ ರ ಮುಖ ಕಾಣುತ್ತಿದ್ದಂತೇ ಚಿಪಾಕ್ ಮೈದಾನದಲ್ಲಿರುವ ಪ್ರೇಕ್ಷಕರು ಸಚಿನ್…ಸಚಿನ್ ಎಂದು ಕರೆದು ಹಳೆಯ ದಿನಗಳನ್ನು ನೆನಪಿಸಿದರು. 2013 ರಲ್ಲಿ ಸಚಿನ್ ನಿವೃತ್ತಿಯಾಗಿದ್ದಾರೆ. ನಿವೃತ್ತಿಯಾದರೂ ಸಚಿನ್ ಮೇಲಿನ ಕ್ರೇಜ್ ಕೂಡಾ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ