ಪ್ಯಾರಾ ಒಲಿಂಪಿಕ್ ವಿಜೇತರನ್ನು ಸನ್ಮಾನಿಸಿದ ಸಚಿನ್ ತೆಂಡೂಲ್ಕರ್

ಬುಧವಾರ, 5 ಅಕ್ಟೋಬರ್ 2016 (13:54 IST)
ರಿಯೋ ಪ್ಯಾರಾ ಒಲಿಂಪಿಕ್ ಪದಕ ವಿಜೇತರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸನ್ಮಾನಿಸಿ 15 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಿದ್ದಾರೆ.
 
ಪ್ಯಾರಾಒಲಿಂಪಿಕ್ ಪದ ವಿಜೇತರಾದ ದೇವೇಂದ್ರ ಝಾಝರಿಯಾ, ಮರಿಯಪ್ಪನ್ ತಂಗವೇಲು, ದೀಪಾ ಮಲಿಕ್ ಮತ್ತು ವರುಣ್ ಸಿಂಗ್ ಭಾಟಿಯವರನ್ನು ಸನ್ಮಾನಿಸಲಾಗಿದೆ.
 
ಝಾಝರಿಯಾ, ಜಾವಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದು, ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದ ಏಕೈಕ ಭಾರತೀಯರಾಗಿದ್ದಾರೆ.
 
ತಂಗವೇಲು ಕೂಡಾ ಹೈಜಂಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದರೆ, ಅದೇ ವಿಭಾಗದಲ್ಲಿ ವರುಣ್ ಸಿಂಗ್ ಭಾಟಿ ಕಂಚಿನ ಪದಕ ಪಡೆದಿದ್ದಾರೆ. ದೀಪಾ ಮಲಿಕ್, ಶಾಟ್ ಪುಟ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 
 
ಪ್ರತಿಯೊಬ್ಬ ಪದಕ ವಿಜೇತರು 15 ಲಕ್ಷ ರೂಪಾಯಿಗಳ ನಗದು ಬಹುಮಾನ ಪಡೆಯಲಿದ್ದಾರೆ ಎಂದು ಗೋ ಸ್ಪೋರ್ಟ್ಸ್ ಫೌಂಡೇಶನ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ