ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರುದ್ಧ ಸೋತ ಬಳಿಕ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ, ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಕ್ಯಾಮರಾ ಎದುರು ಮಾತ್ರ ನಾಟಕವಾಡ್ತಾರೆ ಎಂದು ಆರೋಪಿಸಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಫೈನಲ್ ನಲ್ಲಿ ಸೋತ ಬಳಿಕ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಹಲವು ಆರೋಪಗಳನ್ನು ಮಾಡಿದ್ದಾರೆ. ಭಾರತದ ವಿರುದ್ಧದ ಸೋಲಿನ ಹತಾಶೆಯನ್ನು ಕಕ್ಕಿದ್ದಾರೆ. ಸೂರ್ಯಕುಮಾರ್ ಯಾದವ್ ಟೂರ್ನಮೆಂಟ್ ಆರಂಭಕ್ಕೆ ಮೊದಲು ಪ್ರೆಸ್ ಕಾನ್ಫರೆನ್ಸ್ ನಲ್ಲಿ ನಮ್ಮ ಕೈಕಲುಕಿದ್ದರು.
ಆದರೆ ನಂತರ ಮೈದಾನದಲ್ಲಿ ಕೈಕುಲುಕಲು ನಿರಾಕರಿಸಿದರು. ಅವರು ನಾಟಕವಡುತ್ತಿದ್ದಾರೆ ಎಂದು ಸಲ್ಮಾನ್ ಅಘಾ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಭಾರತ ಟ್ರೋಫಿ ಸ್ವೀಕರಿಸಲು ನಿರಾಕರಿಸಿ ನಮಗೆ ಮಾತ್ರವಲ್ಲ, ಇಡೀ ಕ್ರಿಕೆಟ್ ಗೆ ಅವಮಾನ ಮಾಡಿದೆ.
ಕ್ರಿಕೆಟ್ ಗೆ ಅವಮಾನ ಮಾಡಿದ ಭಾರತಕ್ಕೆ ಈ ಶಾಪ ಖಂಡಿತಾ ತಟ್ಟಲಿದೆ. ಇಂದಲ್ಲದಿದ್ದರೆ ನಾಳೆಯಾದರೂ ಅವರಿಗೆ ಈ ಶಾಪದ ಬಿಸಿ ತಟ್ಟಿಯೇ ತಟ್ಟುತ್ತದೆ. ಮುಂದೆ ಅವರು ಇದಕ್ಕೆ ತಕ್ಕ ಪಾಠ ಕಲಿಯಲಿದ್ದಾರೆ ಎಂದು ಸಲ್ಮಾನ್ ಅಘಾ ಶಾಪ ಹಾಕಿದ್ದಾರೆ.