ಒಂದೇ ಒಂದು ಪಂದ್ಯಾವಾಡದೇ ಏಷ್ಯಾ ಕಪ್ ನಲ್ಲಿ ಟೂರ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ
2025 ರ ಏಷ್ಯಾ ಕಪ್ ಪಂದ್ಯಾವಳಿಗೆ ಟೀಂ ಇಂಡಿಯಾ 15 ಸದಸ್ಯರ ಬಳಗವನ್ನು ಘೋಷಿಸಲಾಗಿತ್ತು. ಈ ಪೈಕಿ 13 ಆಟಗಾರರು ಬೇರೆ ಬೇರೆ ಪಂದ್ಯಗಳನ್ನು ಆಡಿದ್ದರು. ಆದರೆ ಇಬ್ಬರು ಆಟಗಾರರಿಗೆ ಮಾತ್ರ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿರಲಿಲ್ಲ.
ಅವರೆಂದರೆ ಜಿತೇಶ್ ಶರ್ಮಾ. ಬಹುಶಃ ರಿಂಕು ಸಿಂಗ್ ಕೂಡಾ ಇದೇ ಸಾಲಿಗೆ ಸೇರುತ್ತಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರಿಂದ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ ಕೇವಲ ಒಂದೇ ಎಸೆತ ಎದುರಿಸಿದ್ದರು. ಅದೂ ಗೆಲುವಿನ ರನ್ ಆಗಿತ್ತು ಎನ್ನುವುದು ವಿಶೇಷ.
ಆದರೆ ಒಂದೇ ಪಂದ್ಯವನ್ನೂ ಆಡದ ದುರದೃಷ್ಟವಂತನೆಂದರೆ ಆರ್ ಸಿಬಿ ಪರ ಆಡುವ ಜಿತೇಶ್ ಶರ್ಮಾ. ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಇದ್ದ ಕಾರಣ ಜಿತೇಶ್ ಶರ್ಮಾಗೆ ಅವಕಾಶವೇ ಸಿಗಲಿಲ್ಲ. ಜಿತೇಶ್ ಕೂಡಾ ಟಿ20 ಶೈಲಿಗೆ ಹೇಳಿ ಮಾಡಿಸಿದ ಆಟಗಾರ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರೂ ಒಂದೇ ಪಂದ್ಯವಾಡದೇ ಏಷ್ಯಾ ಕಪ್ ಮುಗಿಸಿದ್ದಾರೆ.