ಮದುವೆಯೂ ಕಷ್ಟ, ವಿಚ್ಛೇದನವೂ ಕಷ್ಟ ಎಂದ ಸಾನಿಯಾ ಮಿರ್ಜಾ
ಇದೀಗ ಸಾನಿಯಾ ಮಿರ್ಜಾ ಪ್ರಕಟಿಸಿದ ಗೂಡಾರ್ಥವಿರುವ ಪೋಸ್ಟ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ. ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸಾನಿಯಾ ಮದುವೆ ಕಷ್ಟ, ವಿಚ್ಛೇದನವೂ ಕಷ್ಟ ಎಂಬ ಸಂದೇಶ ಬರೆದುಕೊಂಡಿದ್ದಾರೆ.
ಹೀಗಾಗಿ ಸಾನಿಯಾ ಯಾವ ಅರ್ಥದಲ್ಲಿ ಈ ಸಂದೇಶ ಬರೆದಿದ್ದಾರೆ ಎಂಬ ವಿಶ್ಲೇಷಣೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ. ಈ ಹಿಂದೆಯೂ ಸಾನಿಯಾ ಇಂತಹದ್ದೇ ಗೂಡಾರ್ಥವಿರುವ ಪೋಸ್ಟ್ ಮಾಡಿದ್ದಾಗ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು.
ಆದರೆ ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ ಮತ್ತು ಅಲ್ಲಗಳೆದೂ ಇರಲಿಲ್ಲ. ಆದರೆ ಪುತ್ರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವಾಗ ಇಬ್ಬರೂ ಪರಸ್ಪರರ ಫೋಟೋ ಹಾಕಿಕೊಳ್ಳದೇ ಇರುವುದು ಅನುಮಾನ ಹೆಚ್ಚಿಸಿತ್ತು.