ಹನಿಮೂನ್ ನಲ್ಲೂ ಏಕಾಂಗಿಯಾಗಿ ಬೀಚ್ ನಲ್ಲಿ ಕೂತ ಜಹೀರ್ ಖಾನ್ ಕಾಲೆಳೆದ ಸಾನಿಯಾ ಮಿರ್ಜಾ

ಭಾನುವಾರ, 10 ಡಿಸೆಂಬರ್ 2017 (08:54 IST)
ಮುಂಬೈ: ಹನಿಮೂನ್ ಗೆ  ಹೋದ ದಂಪತಿ ಏಕಾಂಗಿಯಾಗಿ ಕೂತಿದ್ದರೆ ಏನು ಚೆಂದ ಹೇಳಿ? ಕ್ರಿಕೆಟಿಗ ಜಹೀರ್ ಖಾನ್ ವಿಷಯದಲ್ಲೂ ಹಾಗೇ. ಜಹೀರ್ ಇದೀಗ ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ತಮಾಷೆಗೆ ಆಹಾರವಾಗಿದ್ದಾರೆ.
 

ಇತ್ತೀಚೆಗಷ್ಟೇ ಬಾಲಿವುಡ್ ಬೆಡಗಿ ಸಾಗರಿಕಾ ಘಾಟೆ ಜತೆ ಸಪ್ತಪದಿ ತುಳಿದಿದ್ದ ಜಹೀರ್ ಇದೀಗ ಮಾಲ್ಡೀವ್ಸ್ ನಲ್ಲಿ ಹನಿಮೂನ್ ನಲ್ಲಿದ್ದಾರೆ. ಆದರೆ ಸಾಗರಿಕಾ ತನ್ನ ಪತಿ ಜಹೀರ್ ಏಕಾಂಗಿಯಾಗಿ ಸಮುದ್ರ ದಂಡೆಯಲ್ಲಿ ಕಾಲು ಚಾಚಿ ಎತ್ತಲೋ ನೋಡುತ್ತಿರುವ ಫೋಟೋ ಹಾಕಿದ್ದಾರೆ.

ಇದನ್ನು ನೋಡಿ ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ಕಾಮೆಂಟ್ ಮಾಡಿದ್ದು, ಏನಪ್ಪಾ ಜಹೀರ್ ಸಾಹೇಬ್ರು ಏಕಾಂಗಿಯಾಗಿ ಹನಿಮೂನ್ ಮಾಡುತ್ತಿರುವಂತಿದೆ ಎಂದು ಕಾಲೆಳೆದಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಜಹೀರ್ ತನ್ನ ಪತ್ನಿಯೂ ಸಮುದ್ರ ದಂಡೆಯಲ್ಲಿ ಸೂರ್ಯಾಸ್ತಮಾನ ವೀಕ್ಷಿಸುತ್ತಿರುವ ಫೋಟೋ ಹಾಕಿ ‘ವೈಫ್ ಸನ್ ಸೆಟ್ ನೋಡುವುದರಲ್ಲಿ ಬ್ಯುಸಿ’ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ