ನನ್ನ ಜೊತೆ ಮಾತನಾಡಲು ನಿಮಗೆ ಸಮಸ್ಯೆಯಿದೆಯೇ? ರವೀಂದ್ರ ಜಡೇಜಾಗೆ ಸಂಜಯ್ ಮಂಜ್ರೇಕರ್ ಪ್ರಶ್ನೆ
ಈ ಹಿಂದೆ ಜಡೇಜಾ ಒಬ್ಬ ಸಾಮಾನ್ಯ ಆಟಗಾರ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದರಿಂದ ಇಬ್ಬರ ನಡುವೆ ಮಾತಿನ ಗುದ್ದಾಟ ನಡೆದಿತ್ತು. ಆದರೆ ನಿನ್ನೆ ಪಾಕ್ ವಿರುದ್ಧದ ಪಂದ್ಯದ ಬಳಿಕ ಅದೇ ಸಂಜಯ್ ಮಂಜ್ರೇಕರ್, ಜಡೇಜಾರನ್ನು ಮಾತನಾಡಿಸುವ ಪರಿಸ್ಥಿತಿ ಬಂತು.
ಈ ವೇಳೆ ಮಂಜ್ರೇಕರ್ ಆರಂಭದಲ್ಲೇ ನಿಮಗೆ ನನ್ನ ಜೊತೆ ಮಾತನಾಡಲು ಯಾವುದೇ ಸಮಸ್ಯೆಯಿಲ್ಲ ಅಲ್ಲವೇ? ಎಂದು ಕೇಳಿಕೊಂಡೇ ಮಾತು ಶುರು ಮಾಡಿದರು. ಇದಕ್ಕೆ ಜಡೇಜಾ ಕೂಡಾ ನಗುತ್ತಲೇ ಖಂಡಿತಾ ಇಲ್ಲ ಎಂದು ಪಂದ್ಯದ ಬಗ್ಗೆ ಮಾತನಾಡಿದರು.