ಜೈಪುರ: ಐಪಿಎಲ್ ನಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವೀ ನಾಯಕನಾಗಿರುವ ಸಂಜು ಸ್ಯಾಮ್ಸನ್ ತಂಡದಲ್ಲಿ ಸುಳ್ಳು ಹೇಳಿ ಸ್ಥಾನ ಗಿಟ್ಟಿಸಿಕೊಂಡಿದ್ದರಂತೆ. ಈ ವಿಚಾರವನ್ನು ಅವರೀಗ ಬಯಲು ಮಾಡಿದ್ದಾರೆ.
2009 ರಲ್ಲಿ ರಾಜಸ್ಥಾನ್ ತಂಡ ಸಂಜು ಸ್ಯಾಮ್ಸನ್ ರನ್ನು ಖರೀದಿ ಮಾಡಿತ್ತು. ಆದರೆ ಬಳಿಕ 2013 ರಲ್ಲಿ ಅವರು ಕೋಲ್ಕೊತ್ತಾ ನೈಟ್ ರೈಡರ್ಸ್ ಪಾಲಾಗಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಮರು ವರ್ಷವೇ ಅವರನ್ನು ತಂಡದಿಂದ ರಿಲೀಸ್ ಮಾಡಲಾಗಿತ್ತು.
ಆಗ ರಾಜಸ್ಥಾನ್ ತಂಡವನ್ನು ರಾಹುಲ್ ದ್ರಾವಿಡ್ ಮುನ್ನಡೆಸುತ್ತಿದ್ದರು. ಕೇರಳ ಮೂಲದ ವೇಗಿ ಶ್ರೀಶಾಂತ್ ಕೂಡಾ ತಂಡದ ಭಾಗವಾಗಿದ್ದರು. ಕೆಕೆಆರ್ ಮತ್ತು ರಾಜಸ್ಥಾನ್ ನಡುವಿನ ಪಂದ್ಯಕ್ಕೆ ಮೊದಲು ಒಮ್ಮೆ ಹೋಟೆಲ್ ಆವರಣದಲ್ಲಿ ತಿರುಗಾಡುತ್ತಿದ್ದ ಸ್ಯಾಮ್ಸನ್ ರನ್ನು ಕರೆದು ದ್ರಾವಿಡ್ ಗೆ ಶ್ರೀಶಾಂತ್ ಪರಿಚಯ ಮಾಡಿಕೊಟ್ಟಿದ್ದರು.
ಈತ ಕೇರಳ ಮೂಲದವರು. ಲೋಕಲ್ ಟೂರ್ನಮೆಂಟ್ ನಲ್ಲಿ ಈತ ಆರು ಬಾಲ್ ನಲ್ಲಿ ಆರು ಸಿಕ್ಸರ್ ಸಿಡಿಸಿದ್ದಾನೆ. ಭಾರೀ ಟ್ಯಾಲೆಂಟೆಡ್ ಹುಡುಗ ಎಂದು ಹೊಗಳಿ ಅಟ್ಟಕ್ಕೇರಿಸಿದ್ದರು. ದ್ರಾವಿಡ್ ಗೂ ಇದನ್ನು ಕೇಳಿ ಇಂಪ್ರೆಸ್ ಆಗಿತ್ತು. ಹೀಗಾಗಿ ಸಂಜು ನಂತರ ಆರ್ ಆರ್ ತಂಡಕ್ಕೆ ಸೇರಿದರು. ಹೀಗೆ ಸುಳ್ಳು ಹೇಳಿಕೊಂಡೇ ತಾನು ರಾಜಸ್ಥಾನ್ ತಂಡ ಸೇರಿರುವುದಾಗಿ ಸಂಜು ಹೇಳಿಕೊಂಡಿದ್ದಾರೆ.