ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 338 ಕ್ಕೆ ಆಲೌಟ್ ಆಗಿತ್ತು. ಟೀಂ ಇಂಡಿಯಾ ಆರಂಭಿಕ ಶಬ್ನಂ ಗಿಲ್ ಮತ್ತೊಂದು ಸೊಗಸಾದ ಇನಿಂಗ್ಸ್ ಆಡಿ ಭರ್ತಿ 50 ರನ್ ಗಳಿಸಿ ಔಟಾದರು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ರೋಹಿತ್ ಶರ್ಮಾ ಇನಿಂಗ್ಸದ್ 26 ರನ್ ಗೆ ಕೊನೆಗೊಂಡಿತು. ಇದೀಗ ಚೇತೇಶ್ವರ ಪೂಜಾರ 9 ಮತ್ತು ನಾಯಕ ಅಜಿಂಕ್ಯಾ ರೆಹಾನೆ 5 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಇನ್ನೂ 242 ರನ್ ಗಳ ಮೊದಲ ಇನಿಂಗ್ಸ್ ಹಿನ್ನಡೆಯಲ್ಲಿದ್ದಾರೆ.