ಟೀಂ ಇಂಡಿಯಾ ಆಟಗಾರರಿಗೆ ಶಾರುಖ್ ಖಾನ್ ಸಿನಿಮಾ ಹೆಸರುಗಳು!

ಸೋಮವಾರ, 23 ಜನವರಿ 2017 (09:29 IST)
ಮುಂಬೈ: ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾದ ಖ್ಯಾತ ಇಬ್ಬರು ಆಟಗಾರರನ್ನು ಕಾಡು ಪ್ರಾಣಿಗಳಿಗೆ ಹೋಲಿಸಿದ್ದಾಯ್ತು. ಇದೀಗ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಸರದಿ. ಶಾರುಖ್ ಟೀಂ ಇಂಡಿಯಾ ಆಟಗಾರರಿಗೆ ತಮ್ಮ ಚಿತ್ರದ ಹೆಸರುಗಳನ್ನಿಟ್ಟಿದ್ದಾರೆ. ಯಾರು ಯಾರಿಗೆ ಯಾವುದೆಲ್ಲಾ ಹೆಸರು ನೋಡೋಣ.

 
ಭಾರತ ತಂಡದ ಮಾಜಿ ನಾಯಕ ಧೋನಿ “ಬಾಝೀಗರ್” ಆಗಿದ್ದರೆ, ಇಂದಿನ ನಾಯಕ ವಿರಾಟ್ ಕೊಹ್ಲಿ “ಡಾನ್” ಆಗಿದ್ದಾರಂತೆ. ಹೀಗಾಗಿ ಟೀಂ ಇಂಡಿಯಾ “ಬಾಝೀಗರ್”ನಿಂದ “ಡಾನ್”  ಆಗಿದೆ ಎಂದು ಶಾರುಖ್ ಹೇಳಿಕೊಂಡಿದ್ದಾರೆ.

ಇನ್ನು ಸ್ಪಿನ್ನರ್ ಆರ್. ಅಶ್ವಿನ್ “ಪಹೇಲಿ” ಆದರೆ ರೋಹಿತ್ ಶರ್ಮಾ “ಬಾದ್ ಶಹಾ” ಅಂತೆ. ತಮ್ಮ ಮುಂದಿನ ರಾಯ್ಸ್ ಚಿತ್ರದ ಪ್ರಮೋಷನ್ ಗಾಗಿ ಸ್ಟಾರ್ ಸ್ಪೋರ್ಟ್ ಚಾನೆಲ್ ಗೆ ಬಂದಿದ್ದ ಶಾರುಖ್ ಟೀಂ ಇಂಡಿಯಾ ಆಟಗಾರರಿಗೆ ನಾಮಕರಣ ಮಾಡಿದ್ದಾರೆ.  ಒಬ್ಬೊಬ್ಬರು ಆಟಗಾರರ ವರ್ತನೆ, ಸ್ವಭಾವ, ಆಟದ ವೈಖರಿಗೆ ಸಂಬಂಧಿಸಿದಂತೆ ಅವರಿಗೆ ಒಂದೊಂದು ಟೈಟಲ್ ಕೊಟ್ಟಿದ್ದಾರೆ ಶಾರುಖ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ