ತಂಡದಲ್ಲಿಲ್ಲದಿದ್ದರೂ ಟೀಂ ಇಂಡಿಯಾ ಹೋಟೆಲ್ ರೂಂನಲ್ಲಿ ಶಿಖರ್ ಧವನ್? ಕೆಎಲ್ ರಾಹುಲ್ ಗೆ ಕೊಕ್?!
ಈಗಾಗಲೇ ಗಾಯಗೊಂಡಿರುವ ಪೃಥ್ವಿ ಶಾ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ರನ್ನು ಕರೆಸಿಕೊಳ್ಳಲಾಗಿದೆ. ಸದ್ಯಕ್ಕೆ ಟೀಂ ಇಂಡಿಯಾ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ಇಬ್ಬರೂ ಕಳಪೆ ಆಟವಾಡಿದ್ದಾರೆ. ಹೀಗಾಗಿ ಧವನ್ ಗೆ ಅವಕಾಶ ನೀಡಿ ಭಾರತದ ಆರಂಭಿಕರ ಸಮಸ್ಯೆ ನೀಗಿಸುವ ಯೋಜನೆ ರೂಪಿಸುತ್ತಿದೆಯಾ ಎಂಬ ಅನುಮಾನ ಕಾಡಿದೆ. ಆದರೆ ಈ ಬಗ್ಗೆ ಟೀಂ ಇಂಡಿಯಾದಿಂದ ಅಧಿಕೃತ ಮಾಹಿತಿ ಬಂದಿಲ್ಲ.