ದುಲೀಪ್ ಟ್ರೋಫಿಗೂ ಅವರು ಆಯ್ಕೆಯಾಗಿರಲಿಲ್ಲ. ಹೀಗಾಗಿ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ. ಅನೇಕ ನೆನಪುಗಳನ್ನು ಹೊತ್ತು ನನ್ನ ವೃತ್ತಿ ಬದುಕಿನ ಪಯಣವನ್ನು ಇಲ್ಲಿಗೆ ಕೊನೆಗೊಳಿಸುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕೆ ನನ್ನ ಧನ್ಯವಾದಗಳು. ಭಾರತಕ್ಕೆ ಆಡುವುದು ನನ್ನ ಕನಸಾಗಿತ್ತು. ಅದು ನನಸಾಗಿತ್ತು. ಇದಕ್ಕೆ ನಾನು ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್, ನನ್ನ ತಂಡ, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಈಗ ಬದುಕಿನ ಮತ್ತೊಂದು ಪುಟ ತೆರೆಯಲು ಸಮಯವಾಗಿದೆ. ನಾನು ಬಿಸಿಸಿಐ, ಡಿಡಿಸಿಎಗೂ ಅವಕಾಶ ನೀಡಿದ್ದಕ್ಕೆ ಅಭಾರಿಯಾಗಿದ್ದಾನೆ. ಮುಂದೆ ನನ್ನ ದೇಶಕ್ಕಾಗಿ ಆಡಲ್ಲ ಎನ್ನುವುದು ಬೇಸರದ ಸಂಗತಿ. ಆದರೆ ಹಿಂದೆ ನನ್ನ ದೇಶಕ್ಕಾಗಿ ಆಡಿದ್ದೇನೆ ಎಂಬ ಹೆಮ್ಮೆ ನನಗಿರುತ್ತದೆ. ನಾನು ಇಲ್ಲಿಗೆ ನನ್ನ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಗೆ ವಿದಾಯ ಘೋಷಿಸುತ್ತಿದ್ದೇನೆ ಎಂದು ಶಿಖರ್ ಧವನ್ ವಿಡಿಯೋ ಮೂಲಕ ಘೋಷಣೆ ಮಾಡಿದ್ದಾರೆ.
38 ವರ್ಷದ ಶಿಖರ್ ಧವನ್ 34 ಟೆಸ್ಟ್ 7 ಶತಕ ಸೇರಿದಂತೆ 2315 ರನ್, 167 ಏಕದಿನ ಪಂದ್ಯಗಳಿಂದ 17 ಶತಕಗಳೊಂದಿಗೆ 6793 ರನ್, 68 ಟಿ20 ಪಂದ್ಯಗಳಿಂದ 1759 ರನ್ ಗಳಿಸಿದ್ದಾರೆ.