ಸಚಿನ್ ಸರ್ ನನ್ನ ಫೇವರಿಟ್ ಎಂದು ಶುಬ್ಮನ್ ಗಿಲ್

ಗುರುವಾರ, 13 ಏಪ್ರಿಲ್ 2023 (09:00 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಆರಂಭಿಕ ಶುಬ್ಮನ್ ಗಿಲ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಫೇವರಿಟ್ ಆರಂಭಿಕ ಯಾರು ಎಂಬ ಪ್ರಶ್ನೆಗೆ ನೀಡಿದ ಉತ್ತರ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಕೆಲವು ದಿನಗಳ ಮೊದಲು ಗಿಲ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಸಾರಾ ಹೆಸರೆತ್ತಿ ಎಲ್ಲೇ ಹೋದರೂ ಗಿಲ್ ರನ್ನು ಕಾಲೆಳೆಯಲಾಗುತ್ತದೆ.  ಅಷ್ಟೇ ಏಕೆ ಗಿಲ್ ಶತಕ ಬಾರಿಸಿದಾಗಲೆಲ್ಲಾ ಮಾವನಂತೆ ಅಳಿಯ ಎಂದು ಸಚಿನ್ ಗೆ ಹೋಲಿಕೆ ಮಾಡಲಾಗುತ್ತದೆ.

ಇದೀಗ ಸಂದರ್ಶನವೊಂದರಲ್ಲಿ ಗಿಲ್ ಗೆ ನಿಮ್ಮ ಆಲ್ ಟೈಮ್ ಫೇವರಿಟ್ ಓಪನರ್ ಯಾರು ಎಂದು ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿರುವ ಗಿಲ್, ತಮ್ಮ ನಾಯಕ ರೋಹಿತ್ ಶರ್ಮಾರನ್ನು ಅವಗಣಿಸಿ, ಸಚಿನ್ ಸರ್ ಎಂದು ಉತ್ತರ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ