ವೇಗವಾಗಿ 2000 ರನ್, 250 ವಿಕೆಟ್ ಪಡೆದ ಆರ್.ಅಶ್ವಿನ್‌ ದಾಖಲೆ

ಶುಕ್ರವಾರ, 4 ಆಗಸ್ಟ್ 2017 (20:31 IST)
279 ಟೆಸ್ಟ್ ವಿಕೆಟ್‌ಗಳು ಮತ್ತು 2004 ರನ್‌ಗಳ ದಾಖಲೆ ಹೊಂದಿರುವ ಟೀಂ ಇಂಡಿಯಾ ತಂಡದ ಆರ್. ಅಶ್ವಿನ್ ದಾಖಲೆಯನ್ನು ಸ್ಥಾಪಿಸಿದ ನಾಲ್ಕನೇ ಭಾರತೀಯ ಕ್ರಿಕೆಟಿಗರಾದರು. ಕಪಿಲ್ ದೇವ್, ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಮೊದಲ ಮೂವರು ಭಾರತೀಯರಾಗಿದ್ದಾರೆ.
 
ಕೊಲಂಬೊದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಟೆಸ್ಟ್‌ನ ಎರಡನೇ ದಿನದಲ್ಲಿ ರವಿಚಂದ್ರನ್ ಅಶ್ವಿನ್ 11 ನೇ ಟೆಸ್ಟ್ ಅರ್ಧಶತಕ ಪೂರೈಸಿದರು. ಇದರೊಂದಿಗೆ ರಿಚರ್ಡ್ ಹ್ಯಾಡ್ಲೀ, ಇಮ್ರಾನ್ ಖಾನ್ ಮತ್ತು ಇಯಾನ್ ಬೋಥಮ್ ಅವರಂತಹ ಕ್ರಿಕೆಟಿಗರ ಸಾಲಿನಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದರು.
 
ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಶತಕ ದಾಖಲಿಸಿದ್ದ ಚೇತೇಶ್ವರ್ ಪೂಜಾರ್ ಮತ್ತು ಅಜಿಂಕ್ಯ ರೆಹಾನೆ ಔಟ್ ಆಗಿ ಪೆವಿಲಿಯನ್‌ನಿಂದ ನಿರ್ಗಮಿಸಿದರು.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ