ಸ್ಮೃತಿ ಮಂಧನಾ ಕ್ರಶ್ ಯಾರು ಗೊತ್ತಾ?

ಬುಧವಾರ, 22 ಫೆಬ್ರವರಿ 2023 (08:50 IST)
Photo Courtesy: Twitter
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ಆಟಗಾರ್ತಿ, ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಹೆಸರು ಈಗ ಭಾರೀ ಸುದ್ದಿಯಲ್ಲಿದೆ.

ಐಪಿಎಲ್ ನ ದುಬಾರಿ ಆಟಗಾರ್ತಿ, ಕ್ವೀನ್ ಎಂದೇ ಕರೆಯಿಸಿಕೊಳ್ಳುವ ತಮ್ಮ ಬ್ಯಾಟಿಂಗ್ ನಿಂದ ಎದುರಾಳಿಗಳ ಪಾಲಿಗೆ ಸಿಂಹ ಸ್ವಪ್ನರಾಗುತ್ತಿದ್ದಾರೆ. 26 ವರ್ಷದ ಸ್ಮೃತಿಗೆ ತಮ್ಮದೇ ಫ್ಯಾನ್ ಬೇಸ್ ಇದೆ. ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಆಟಗಾರ್ತಿಯರ ಲಿಸ್ಟ್ ನಲ್ಲಿ ಸ್ಮೃತಿ ಹೆಸರೂ ಇದೆ.

ಇಂತಿಪ್ಪ ಸ್ಮೃತಿ ಮಂಧನಾ ಅದೆಷ್ಟೋ ಫ್ಯಾನ್ಸ್ ಗೆ ಕ್ರಶ್.  ಹಾಗಿದ್ದರೆ ಸ್ಮೃತಿ ತಮ್ಮ ಕ್ರಶ್ ಯಾರು ಎಂಬುದನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಹೃತಿಕ್ ರೋಷನ್ ಸ್ಮೃತಿ ಕ್ರಶ್ ಅಂತೆ. ಅವರ ಸಿನಿಮಾಗಳನ್ನು ಬಿಡದೇ ನೋಡುತ್ತಿದ್ದರು. ಈಗ ಯುವ ನಟ ಕಾರ್ತಿಕ್ ಆರ್ಯನ್ ಆರ್ಯನ್ ಸ್ಮೃತಿ ಕ್ರಶ್. ಹೀಗಂತ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ