‘ದಾದ’ ಗಂಗೂಲಿ ಬಿಸಿಸಿಐ ಅಧ್ಯ ಕ್ಷಗಿರಿ ಭವಿಷ್ಯ ಆಗಸ್ಟ್ 17 ಕ್ಕೆ ನಿರ್ಧಾರ
ಭಾನುವಾರ, 26 ಜುಲೈ 2020 (09:24 IST)
ಮುಂಬೈ: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಬೇಕೋ ಅಥವಾ ಈ ಅವಧಿ ಮುಗಿದ ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕೋ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್ ಆಗಸ್ಟ್ 17 ಕ್ಕೆ ತೀರ್ಮಾನಿಸಲಿದೆ.
ಲೋಧಾ ಸಮಿತಿಯ ಶಿಫಾರಸ್ಸಿಗೆ ತಿದ್ದುಪಡಿ ತಂದು ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಗಂಗೂಲಿಗೆ ಮತ್ತು ಕಾರ್ಯದರ್ಶಿಯಾಗಿ ಮುಂದುವರಿಯಲು ಜಯ್ ಶಾಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಆಗಸ್ಟ್ 17 ಕ್ಕೆ ತೀರ್ಪು ಪ್ರಕಟಿಸುವ ಸಾಧ‍್ಯತೆಯಿದೆ. ಮೂಲಗಳ ಪ್ರಕಾರ ತೀರ್ಪು ಗಂಗೂಲಿ ಪರವಾಗಿಯೇ ಬರುವ ಸಾಧ‍್ಯತೆಯಿದೆ ಎನ್ನಲಾಗಿದೆ.