ವಿಶ್ವಕಪ್ ನಿಂದ ಹೊರಬಿದ್ದ ಲಂಕಾ ನಾಯಕ ದಸುನ್ ಶನಕ

ಸೋಮವಾರ, 16 ಅಕ್ಟೋಬರ್ 2023 (09:00 IST)
ಮುಂಬೈ: ಈ ಬಾರಿ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಇಂದು ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ ಪಂದ್ಯವಾಡಲಿದ್ದು, ಅದಕ್ಕೂ ಮೊದಲೇ ನಾಯಕ ದಸುನ್ ಶನಕ ಗಾಯಗೊಂಡು ಕೂಟದಿಂದಲೇ ಹೊರನಡೆಯುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ.

ಕಳೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ದಸುನ್ ಗಾಯಗೊಂಡಿದ್ದರು. ಆದರೆ ಅವರ ಗಾಯ ಗಂಭೀರವಾಗಿರುವ ಕಾರಣ ಕೂಟದಿಂದಲೇ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಆಲ್ ರೌಂಡರ್ ಚಾಮಿಕಾ ಕರುಣಾರತ್ನ ಅವರನ್ನು ಕರೆಸಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ