ಹೆರಾತ್ ಸ್ಪಿನ್ ದಾಳಿಗೆ ಆಸೀಸ್ ಧೂಳೀಪಟ: ಶ್ರೀಲಂಕಾಗೆ ಐತಿಹಾಸಿಕ ಟೆಸ್ಟ್ ಜಯ

ಶನಿವಾರ, 30 ಜುಲೈ 2016 (15:38 IST)
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ಪಾಲಿಕೆಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಿರೀಕ್ಷೆಯಂತೆ ಜಯಗಳಿಸುವ ಮೂಲಕ 1-0ಯಿಂದ ಮುನ್ನಡೆ ಸಾಧಿಸಿದೆ. ರಂಗನಾ ಹೆರಾತ್ ಅವರ ಮಾರಕ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 161ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶ್ರೀಲಂಕಾ 106 ರನ್‌ಗಳಿಂದ ಜಯಗಳಿಸಿದೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಗಳಿಸಿದ್ದರೂ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಕುಶಾಲ್ ಮೆಂಡಿಸ್ ಅವರ 176 ರನ್ ಮನೋಜ್ಞ ಬ್ಯಾಟಿಂಗ್ ನೆರವಿನಿಂದ 353 ರನ್ ಸ್ಕೋರನ್ನು ದಾಖಲಿಸಿತು. ಮೆಂಡಿಸ್‌ಗೆ ಚಾಂಡಿಮಾಲ್ ಮತ್ತು ಡಿಸಿಲ್ವ ಬೆಂಬಲವಾಗಿ ನಿಂತರು.
 
 ಶ್ರೀಲಂಕಾದ ಹಿಂದಿನ ಟೆಸ್ಟ್ ಜಯವು 1999ರ ಸೆಪ್ಟೆಂಬರ್ 11ರಂದು ಕ್ಯಾಂಡಿಯ ಆಸ್ಗಿರಿಯಾ ಸ್ಟೇಡಿಯಂನಲ್ಲಿ ದಕ್ಕಿತ್ತು. ಸುಮಾರು 6118 ದಿನಗಳ ಬಳಿಕ ಶ್ರೀಲಂಕಾ ಮುತ್ತಯ ಮುರಳೀಧರನ್, ಸಂಗಕ್ಕರಾ, ಜಯಸೂರ್ಯ, ದಿಲ್ಶನ್ ನೆರವಿಲ್ಲದೇ ಐತಿಹಾಸಿಕ 106 ರನ್ ಜಯ ಸಾಧಿಸಿದೆ. ರಂಗನಾಥ್ ಹೆರಾತ್‌ಗೆ ನಿಗೂಢ ಸ್ಪಿನ್ನರ್ ಲಕ್ಷನ್ ಸಂದಾಕನ್ ಕೂಡ ಸಾಥ್ ನೀಡಿ ಶ್ರೀಲಂಕಾಗೆ ಭರ್ಜರಿ ಜಯವನ್ನು ತಂದಿತ್ತರು.
 
ಶ್ರೀಲಂಕಾ ಮೊದಲ ಇನ್ನಿಂಗ್ಸ್ 117ಕ್ಕೆ 10 ವಿಕೆಟ್ 
ಮಿಚೆಲ್ ಸ್ಟಾರ್ಕ್  2 ವಿಕೆಟ್, ಹ್ಯಾಜಲ್‌ವುಡೇ 3 ವಿಕೆಟ್, ಒ ಕೀಫ್ 2 ವಿಕೆಟ್ ಮತ್ತು ಲಯನ್ 3 ವಿಕೆಟ್.
 ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 203 ರನ್ 
ಬೌಲಿಂಗ್ ವಿವರ
ನುವಾನ್ ಪ್ರದೀಪ್ 2 ವಿಕೆಟ್, ರಂಗನಾ ಹೆರಾತ್ 4 ವಿಕೆಟ್, ಸಂದಾಕನ್ 4 ವಿಕೆಟ್ 
 ಶ್ರೀಲಂಕಾ ಎರಡನೇ ಇನ್ನಿಂಗ್ಸ್ 353ಕ್ಕೆ 10 ವಿಕೆಟ್ 
 ಬೌಲಿಂಗ್ ವಿವರ
ಮಿಚೆಲ್ ಸ್ಟಾರ್ಕ್ 4 ವಿಕೆಟ್, ಹ್ಯಾಜಲ್‌ವುಡ್ 2 ವಿಕೆಟ್ ಲಯನ್ 2 ವಿಕೆಟ್
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 161ಕ್ಕೆ 10 ವಿಕೆಟ್, ಶ್ರೀಲಂಕಾಗೆ 106 ರನ್ ಜಯ.
ಬ್ಯಾಟಿಂಗ್ ವಿವರ
ಜೋಯಿ ಬರ್ನ್ಸ್ 29, ಸ್ಟೀವನ್ ಸ್ಮಿತ್ 55, ಮಿಚೆಲ್ ಮಾರ್ಷ್ 25 
ವಿಕೆಟ್ ಪತನ
2-1 (ಡೇವಿಡ್ ವಾರ್ನರ್, 1.2), 33-2 (ಉಸ್ಮಾನ್ ಖ್ವಾಜಾ, 8.1) 63-3 (ಜೋ ಬರ್ನ್ಸ್, 17.6), 96-4 (ಆಡಮ್ ವೋಗ್ಸ್, 34.2), 139-5 (ಮಿಚೆಲ್ ಮಾರ್ಷ್, 47.3), 140-6 (ಸ್ಟೀವನ್ ಸ್ಮಿತ್, 49.4), 141-7 (ಮಿಚೆಲ್ ಸ್ಟಾರ್ಕ್, 50.2), 157-8 (ನಥಾನ್ ಲಿನ್, 56.1), 161-9 (ಪೀಟರ್ ನೆವಿಲ್, 85.5), 161-10 (ಸ್ಟೀವ್ ಓ ಕೀಫ್, 88.3 )
ಬೌಲಿಂಗ್ ವಿವರ
ರಂಗನಾಥ್ ಹೆರಾತ್ 5 ವಿಕೆಟ್, ಲಕ್ಷಣ್ ಸಂದಾಕನ್ 3 ವಿಕೆಟ್

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ