ಡಬ್ಲ್ಯುಪಿಎಲ್: ಇಂದಾದರೂ ಆರ್ ಸಿಬಿಗೆ ದಕ್ಕುತ್ತಾ ಮೊದಲ ಜಯ?
ಮೊದಲ ಪಂದ್ಯದಲ್ಲಿ ಆರ್ ಸಿಬಿ ಡೆಲ್ಲಿ ವಿರುದ್ಧ ಆಡಿ ಸೋಲು ಕಂಡಿತ್ತು. ಇದೀಗ ಮತ್ತೆ ಮೊದಲ ಗೆಲುವಿನ ಪ್ರಯತ್ನದಲ್ಲಿರುವ ಆರ್ ಸಿಬಿಗೆ ಕಠಿಣ ಎದುರಾಳಿ ಎದುರಾಗಿದೆ. ಡೆಲ್ಲಿ ಕಳೆದ ಪಂದ್ಯದಲ್ಲಿ ಮಾಡಿದ್ದ ಬ್ಯಾಟಿಂಗ್ ಆರ್ ಸಿಬಿ ತಲೆನೋವು ಹೆಚ್ಚಿಸಿರುತ್ತದೆ.
ಈ ಡಬ್ಲ್ಯುಪಿಎಲ್ ನಲ್ಲಿ ಮುಂದಿನ ಹಂತಕ್ಕೆ ತೇರ್ಗಡೆಯಾಗುವುದು ಆರ್ ಸಿಬಿಗೆ ಕಷ್ಟವೇ. ಆದರೆ ಪ್ರತಿಷ್ಠೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಮೃತಿ ಮಂಧನಾ ಪಡೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.