ಮಾಜಿ ಮುಖ್ಯ ನ್ಯಾಯಮೂರ್ತಿ ಆರ್‌ಎಂ ಲೋಧಾ ನೇತೃತ್ವದ ಮೂವರು ಸದಸ್ಯರ ಸಮಿತಿ ಮಂಡಿಸಿದ ಶಿಫಾರಸುಗಳ ಪಟ್ಟಿಯಲ್ಲಿ ಸುಪ್ರೀಂಕೋರ್ಟ್ ಬಹುತೇಕ ಒಪ್ಪಿಕೊಂಡಿದೆ. ಒಪ್ಪಿಕೊಂಡ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಬಿಸಿಸಿಐ 6 ತಿಂಗಳ ಗಡುವನ್ನು ಕೂಡ ನೀಡಿದೆ. ಸುಪ್ರೀಂಕೋರ್ಟ್ ಸೋಮವಾರ ಬಿಸಿಸಿಐ ಆಡಳಿತದಲ್ಲಿ ಯಾವುದೇ ಸಚಿವರು ಇರಬಾರದೆಂಬ ಪ್ರಸ್ತಾವನೆಗೆ ಮತ್ತು ಮಂಡಳಿ ಸದಸ್ಯರಿಗೆ 70 ವರ್ಷದ ವಯೋಮಿತಿ ವಿಧಿಸಬೇಕೆಂಬ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ.
ಬಿಸಿಸಿಐ ಮಾರ್ಚ್ ಆರಂಭದಲ್ಲಿ ಪ್ರಮಾಣಪತ್ರ ಸಲ್ಲಿಸಿ ಪಂದ್ಯಗಳ ನಡುವೆ ಜಾಹೀರಾತು ನೀಡುವುದು, ಅಧಿಕಾರಿಗಳ ವಯೋಮಿತಿ, ಅಧಿಕಾರಿ ತನ್ನ ಅವಧಿ ಮುಗಿಸಿದ ಬಳಿಕ ಮೂರು ವರ್ಷಗಳ ಕೂಲಿಂಗ್ ಆಫ್ ಪೀರಿಯಡ್ ಮತ್ತು ಒಂದು ರಾಜ್ಯ, ಒಂದು ಮತವನ್ನು ಕುರಿತ ಲೋಧಾ ಸಮಿತಿಯ ಶಿಫಾರಸುಗಳನ್ನು ವಿರೋಧಿಸಿತ್ತು.