ಸುಪ್ರೀಂ ಕೋರ್ಟ್ ಒಪ್ಪಿಗೆಯಿಲ್ಲದೆ ಟೀಂ ಇಂಡಿಯಾಗೆ ಪ್ರೈಸ್ ಹಣ ಸಿಗಲ್ಲ
ಗುರುವಾರ, 22 ಡಿಸೆಂಬರ್ 2016 (11:18 IST)
ನವದೆಹಲಿ: ಬಿಸಿಸಿಐಯಲ್ಲಿ ಈಗ ಹುಲ್ಲು ಕಡ್ಡಿ ಆಡಬೇಕಾದರೂ, ಸುಪ್ರೀಂ ಕೋರ್ಟ್ ಒಪ್ಪಿಗೆ ಬೇಕು. ಈಗ ಟೀಂ ಇಂಡಿಯಾಕ್ಕೆ ದುಡ್ಡು ಕೊಡಬೇಕಾದರೂ ಕೋರ್ಟ್ ಒಪ್ಪಿಗೆ ಕೊಡಬೇಕು. ದೇಶಕ್ಕೇ ಒಂದು ಆರ್ಥಿಕ ನಿರ್ಬಂಧನೆಯಿದ್ದರೆ, ಬಿಸಿಸಿಐ ಹಣಕಾಸಿನ ವಿಚಾರವನ್ನು ಸುಪ್ರೀಂ ಕೋರ್ಟ್ ಇನ್ನೊಂದು ರೀತಿಯಲ್ಲಿ ನಿಯಂತ್ರಿಸುತ್ತಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಲೆಕ್ಕದಲ್ಲಿ ವಿರಾಟ್ ಕೊಹ್ಲಿ ಪಡೆಗೆ ಬಹುಮಾನ ಹಣ ಸಂದಾಯ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡುತ್ತಿಲ್ಲ. ಯಾಕೆಂದರೆ ಲೋಧಾ ಸಮಿತಿಯ ವರದಿಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐಗೆ ಆರ್ಥಿಕ ದಿಗ್ಬಂಧನ ವಿಧಿಸಿದೆ. ಬೇಕಾಬಿಟ್ಟಿ ಖರ್ಚು ಮಾಡುವಂತಿಲ್ಲ. ಇದೀಗ ತಲೆನೋವಾಗಿದೆ.
ಬಿಸಿಸಿಐ ಈಗ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಪ್ರತೀ ಪಂದ್ಯಕ್ಕೆ 25 ಲಕ್ಷ ರೂ. ನಂತೆ ಖರ್ಚು ಮಾಡಲು ಕೋರ್ಟ್ ಒಪ್ಪಿಗೆ ಪಡೆಯಲು ಚಿಂತನೆ ನಡೆಸಿದೆ. ಅದರ ಜತೆಗೆ ಬಹುಮಾನ ಹಣಕ್ಕೂ ಅರ್ಜಿ ಹಾಕುತ್ತದೋ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ