ಗಾಂಧೀಜಿ ಬ್ರಿಟಿಷರ ಸೇವಕರಾಗಿದ್ದರು ಎಂದು ಕೇಳಿಸಿಕೊಳ್ಳಬೇಕಾ: ರಾಹುಲ್ ಗಾಂಧಿಗೆ ಕೋರ್ಟ್ ತರಾಟೆ
ರಾಹುಲ್ ಗಾಂಧಿ ಈ ಹಿಂದೆ ವಿಡಿ ಸಾವರ್ಕರ್ ಬ್ರಿಟಿಷರ ಸೇವಕ ಎಂದು ಅವಮಾನ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ರಾಹುಲ್ ಗಾಂಧಿ ವಿರುದ್ಧ ದೂರು ಸಲ್ಲಿಸಿದ್ದರು. ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನೀಡಲಾದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಅಲಹಾಬಾದ್ ಆದೇಶಕ್ಕೆ ತಡೆ ನೀಡಿದೆ.
ಆದರೆ ರಾಹುಲ್ ಹೇಳಿಕೆ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ನೋಡುವ ರೀತಿ ಇದೇನಾ? ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧದ ಇಂತಹ ಹೇಳಿಕೆಗಳನ್ನು ನಾವು ಅನುಮತಿಸುವುದಿಲ್ಲ. ಮುಂದೆ ಇಂತಹ ಹೇಳಿಕೆ ನೀಡಿದರೆ ಸ್ವಯಂಪ್ರೇರಿತರಾಗಿ ದೂರು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಈ ಹಿಂದೆ ಮಹಾತ್ಮಾ ಗಾಂಧೀಜಿಯವರೂ ತಮ್ಮ ಪತ್ರದಲ್ಲಿ ಯುವರ್ ಫೈಥ್ ಫುಲ್ ಸರ್ವೆಂಟ್ ಎಂದು ಬರೆದಿದ್ದರು. ಅದರ ಅರ್ಥ ಅವರು ಬ್ರಿಟಿಷರ ಸೇವಕರೆಂದೇ? ಎಂದು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.