ಟಿ20 ವಿಶ್ವಕಪ್ 2024: ವಿರಾಟ್ ಕೊಹ್ಲಿಗೆ ಇಂದು ಸ್ಪೆಷಲ್ ಡೇ, ಇಂದು ಬಿಗ್ ಸ್ಕೋರ್ ಮಾಡಲೇಬೇಕು

Krishnaveni K

ಬುಧವಾರ, 12 ಜೂನ್ 2024 (10:43 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾ, ಅತಿಥೇಯ ಅಮೆರಿಕಾ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ವಿಶೇಷವಾಗಿದೆ. ಅವರು ಇಂದು ಬಿಗ್ ಸ್ಕೋರ್ ಮಾಡಿದರೆ ಮತ್ತಷ್ಟು ವಿಶೇಷವಾಗಲಿದೆ. ಯಾಕೆ ಇಲ್ಲಿ ನೋಡಿ.

ಇಂದು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ದಿನ. 14 ವರ್ಷಗಳ ಹಿಂದೆ ಇದೇ ದಿನ ಕೊಹ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಇಂದು ಇದೇ ದಿನ ಟೀಂ ಇಂಡಿಯಾ ಟಿ20 ವಿಶ್ವಕಪ್ ನಲ್ಲಿ ಯುಎಸ್ ಎ ವಿರುದ್ಧ ಪಂದ್ಯವಾಡಲಿದೆ.

ಇಂದಿನ ಪಂದ್ಯ ಗೆದ್ದರೆ ಟೀಂ ಇಂಡಿಯಾ ಸೂಪರ್ 8 ಕ್ಕೆ ಲಗ್ಗೆಯಿಡಲಿದೆ. ಆದರೆ ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಇಂದು ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ದಿನ ಎಂಬುದು ವಿಶೇಷ. ಕಳೆದ ಎರಡೂ ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದರು. ಅಮೆರಿಕಾದಲ್ಲಿ ಎಷ್ಟೋ ಮಂದಿ ಅವರಿಗೆ ಅಭಿಮಾನಿಗಳಿದ್ದಾರೆ.

ಕೊಹ್ಲಿ ಸರ್ವಕಾಲಿಕ ಶ್ರೇಷ್ಠ ಬ್ಯಾಟಿಗ. ಈ  ವಿಶೇಷ ದಿನದಂದು ಬಿಗ್ ಸ್ಕೋರ್ ಮಾಡಲಿ ಎಂದು ಎಷ್ಟೋ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕೊಹ್ಲಿ ಇಂದು ದೊಡ್ಡ ಮೊತ್ತ ಗಳಿಸಲು ಸಾಧ್ಯವಾದರೆ ಅವರ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಹೀಗಾಗಿ ಈ ವಿಶೇಷ ದಿವನ್ನು ಸ್ಮರಣೀಯವಾಗಿಸಲು ಕೊಹ್ಲಿಯೂ ಪ್ರಯತ್ನ ನಡೆಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ